ಡಾ. ವಿನಯ ಹೆಗ್ಡೆಗೆ ರೋಟರಿ ವಂದನಾ ಪ್ರಶಸ್ತಿ ಪ್ರದಾನ

Update: 2020-06-28 16:48 GMT

ಮಂಗಳೂರು, ಜೂ.28: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸಿದ ರಾಜ್ಯಮಟ್ಟದ ವಾರ್ಷಿಕ 2020ನೇ ಸಾಲಿನ ವಂದನಾ ಪ್ರಶಸ್ತಿಯನ್ನು ಖ್ಯಾತ ಶಿಕ್ಷಣ ತಜ್ಞ ಮತ್ತು ನಿಟ್ಟೆ ವಿವಿ ಕುಲಪತಿ ಡಾ. ವಿನಯ ಹೆಗ್ಡೆ ಅವರಿಗೆ ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಪ್ರದಾನ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನಗೈದು ಶುಭ ಹಾರೈಸಿದರು. ಬಳಿಕ ರೋಟರಿ ಸಂಸ್ಥೆಯ ನೂತನ ಲಾಂಛನವನ್ನು ಬಿಡುಗಡೆಗೊಳಿಸಿದರು

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ.ವಿನಯ ಹೆಗ್ಡೆ ‘ಜೀವನದಲ್ಲಿ ಏನು ಸಾಧಿಸಿದರೂ ಅದು ಹೆತ್ತವರ ಆಶೀರ್ವಾದ ಮತ್ತು ಸಂಸ್ಥೆಯ ಸಿಬ್ಬಂದಿ ವೃಂದದ ಪ್ರಾಮಾಣಿಕ ಪರಿಶ್ರಮ ಹಾಗು ಕರ್ತವ್ಯ ನಿಷ್ಠೆ ಎಂದರು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಗೀತಾನಂದ ಪೈ ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ ‘ಸೆಂಟೊರ್’ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪ್ರೇಮ್‌ನಾಥ್ ಕುಡ್ವ, ಸ್ಥಾಪಕ ಸದಸ್ಯ ಸತೀಶ್ ಪೈ ಅವರನ್ನು ಅಭಿನಂದಿಸಲಾಯಿತು.

ರೋಟರಿ ಮಂಗಳೂರು ಸೆಂಟ್ರಲ್‌ನ ನಿಯೋಜಿತ ಅಧ್ಯಕ್ಷ ಪ್ರಕಾಶ್‌ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ದೇವದಾಸ್ ರೈ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ಹೆಗ್ಡೆ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ಸಂತೋಷ್ ಶೇಟ್, ರೋಟರ್ಯಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಗಣೇಶ್ ಉಪಸ್ಥಿತರಿದ್ದರು. ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಶೆಲ್ಡಾನ್ ಕ್ರಾಸ್ತ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News