ಕುದ್ರೋಳಿ ಕೆರೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಚಾಲನೆ

Update: 2020-06-28 16:50 GMT

ಮಂಗಳೂರು, ಜೂ.28: ನಗರದ ಕುದ್ರೋಳಿ ಜುಮ್ಮಾ ಮಸೀದಿಯ ಕೆರೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ರವಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕುದ್ರೋಳಿ ವಾರ್ಡಿನ ಜುಮಾ ಮಸೀದಿಯ ಆವರಣದಲ್ಲಿರುವ ಕೆರೆ ಅಭಿವೃದ್ಧಿಗೆ ಸ್ಥಳೀಯ ಬಿಜೆಪಿ ಮುಖಂಡ ಅರ್ಷದ್ ಕುದ್ರೋಳಿ ಮನವಿ ಮಾಡಿಕೊಂಡಿದ್ದರು. ಅದರಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರೂ. ಬಿಡುಗಡೆ ಗೊಳಿಸಲಾಗಿದೆ ಎಂದರು.

ಅಂತರ್ಜಲ ವೃದ್ಧಿಗೆ ಕೆರೆಗಳ ಅಭಿವೃದ್ಧಿ ಪೂರಕವಾಗಿದೆ. ಹಾಗಾಗಿ ಪಾಳು ಬಿದ್ದಿರುವ ಅಥವಾ ಜೀರ್ಣಾವಸ್ಥೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ನಾವು ವಿಶೇಷ ಮುತುವರ್ಜಿ ವಹಿಸಿ ಎಲ್ಲಾ ಕೆರೆಗಳ ಅಭಿವೃದ್ಧಿಪಡಿಸಲಾಗುವುದು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಮೇಯರ್ ದಿವಾಕರ್ ಪಾಂಡೇಶ್ವರ, ಮುಡಾ ಆಯುಕ್ತ ದಿನೇಶ್, ಕಾರ್ಪೊರೇಟರ್ ಶಂಶುದ್ದೀನ್, ಕುದ್ರೋಳಿ ನಡುಪಳ್ಳಿ ಜುಮ್ಮಾ ಮಸೀದಿಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ, ಸ್ಥಳೀಯರಾದ ರಂಗನಾಥ್, ಅರ್ಷಾದ್ ಪೋಪಿ, ಭವಾನಿ ಶಂಕರ್, ರಂಗನಾಥ್, ರಾಜೇಶ್, ಶ್ಯಾಮ ಸುಂದರ್, ಮಸೀದಿಯ ಅಧ್ಯಕ್ಷ ಫಝಲ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News