ಬಂಟ್ವಾಳ: ಕೊರೋನದಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ

Update: 2020-06-28 17:12 GMT

ಬಂಟ್ವಾಳ, ಜೂ.28: ಕೋವಿಡ್ - 19 (ಕೊರೋನ) ಸೋಂಕಿಗೆ ಮೃತಪಟ್ಟ ತಾಲೂಕಿನ ಲೊರೆಟೊ ಪದವು ಮಹಿಳೆಯ ದಫನ ಕಾರ್ಯವನ್ನು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಶೇಷ ತರಬೇತಿ ಪಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ರವಿವಾರ ನೆರವೇರಿಸಿದರು.

ಲೊರೆಟೊ ಪದವು ಜುಮಾ ಮಸೀದಿಯ ದಫನ ಭೂಮಿಯಲ್ಲಿ ನಡೆದ ಅಂತ್ಯಸಂಸ್ಕಾರದ ವೇಳೆ ಇಲ್ಲಿನ ಬದ್ರ್ ಜುಮಾ ಮಸೀದಿಯ ಖತೀಬ್ ಶರೀಫ್ ಅರ್ಶದಿ ನೇತೃತ್ವದಲ್ಲಿ ನಮಾಝ್ ನಿರ್ವಹಿಸಲಾಯಿತು. ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ, ಪಿ.ಎಫ್.ಐ. ಸದಸ್ಯರಾದ ಉಬೈದುಲ್ಲಾ ಬಂಟ್ವಾಳ, ಇಸ್ಮಾಯೀಲ್ ಬಂಟ್ವಾಳ, ಅಬ್ದುಲ್ ಲತೀಫ್ ಬಂಟ್ವಾಳ, ಫಿರೋಜ್ ಗೂಡಿನ ಬಳಿ, ನಿಸಾರ್ ವಳವೂರು ಮೃತರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಮೃತರ ಕಿರಿಯ ಮಗ ಸುಹೈಲ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News