ದಕ್ಷಿಣ ಚೀನಾ ಸಮುದ್ರ ಚೀನಾದ ಸಾಗರ ಸಾಮ್ರಾಜ್ಯವಲ್ಲ: ಪಾಂಪಿಯೊ

Update: 2020-06-28 17:45 GMT

ವಾಶಿಂಗ್ಟನ್, ಜೂ. 28: ದಕ್ಷಿಣ ಚೀನಾ ಸಮುದ್ರದ ವಿವಾದಗಳನ್ನು ಅಂತರ್‌ರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಇತ್ಯರ್ಥಪಡಿಸಬೇಕು ಎಂಬ ಆಸಿಯಾನ್ ಒಕ್ಕೂಟದ ಸದಸ್ಯ ದೇಶಗಳ ಹೇಳಿಕೆಯನ್ನು ಅಮೆರಿಕ ಸ್ವಾಗತಿಸಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕಲ್ ಪಾಂಪಿಯೊ ಸ್ಥಳೀಯ ಸಮಯ ಶನಿವಾರ ಹೇಳಿದ್ದಾರೆ.

‘‘ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ ಸೇರಿದಂತೆ ಅಂತರ್‌ರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ದಕ್ಷಿಣ ಚೀನಾ ಸಮುದ್ರದ ವಿವಾದವನ್ನು ಇತ್ಯರ್ಥಪಡಿಸಬೇಕು ಎಂಬ ಆಸಿಯಾನ್ ನಾಯಕರ ಹೇಳಿಕೆಯನ್ನು ಅಮೆರಿಕ ಸ್ವಾಗತಿಸುತ್ತದೆ. ದಕ್ಷಿಣ ಚೀನಾ ಸಮುದ್ರ ತನ್ನ ಸಾಗರ ಸಾಮ್ರಾಜ್ಯವೆಂಬಂತೆ ಭಾವಿಸಲು ಚೀನಾಕ್ಕೆ ಅವಕಾಶ ನೀಡಲಾಗದು. ಈ ವಿಷಯದಲ್ಲಿ ಶೀಘ್ರದಲ್ಲೇ ನಾವು ಹೆಚ್ಚಿನದನ್ನು ಹೇಳುವವರಿದ್ದೇವೆ’’ ಎಂದು ಪಾಂಪಿಯೊ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ನಡೆದ 36ನೇ ಆಸಿಯಾನ್ ಶೃಂಗಸಮ್ಮೇಳನದ ಬಳಿಕ, ಒಕ್ಕೂಟದ ಸದಸ್ಯ ದೇಶಗಳು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ದಕ್ಷಿಣ ಚೀನಾ ಸಮುದ್ರದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News