ಬೀಜಿಂಗ್ ಹೊರವಲಯದಲ್ಲಿ 5 ಲಕ್ಷ ಮಂದಿ ಮತ್ತೆ ಲಾಕ್‌ಡೌನ್ ವ್ಯಾಪ್ತಿಗೆ

Update: 2020-06-28 17:54 GMT

ಬೀಜಿಂಗ್, ಜೂ. 28: ಹೊಸದಾಗಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಚೀನಾ ರಾಜಧಾನಿ ಬೀಜಿಂಗ್‌ನ ಹೊರವಲಯದ ಕೆಲವು ಸ್ಥಳಗಳಲ್ಲಿ ಅಧಿಕಾರಿಗಳು ರವಿವಾರ ಲಾಕ್‌ಡೌನ್ ಹೇರಿದ್ದಾರೆ. ಈ ಲಾಕ್‌ಡೌನ್‌ನ ವ್ಯಾಪ್ತಿಗೆ ಸುಮಾರು 5 ಲಕ್ಷ ಜನರು ಒಳಪಟ್ಟಿದ್ದಾರೆ.

ಅದೇ ವೇಳೆ, ದೇಶದಲ್ಲಿ ಹೊಸದಾಗಿ ಅಲ್ಲಲ್ಲಿ ಕೊರೋನ ವೈರಸ್ ಪ್ರಕರಣಗಳು ಕಾಣಿಸಿ ಕೊಂಡಿರುವಾಗ, ನಿರ್ಬಂಧಗಳಲ್ಲಿ ಸಡಿಲಿಕೆಗಳನ್ನು ಮಾಡುವ ಪ್ರಸ್ತಾಪವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

 ಚೀನಾವು ಮೊದಲ ಹಂತದ ಕೊರೋನ ವೈರಸ್ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ, ಬೀಜಿಂಗ್ ಹಾಗೂ ದೇಶದ ಇತರ ಕೆಲವು ಭಾಗಗಳಲ್ಲಿ ಹೊಸದಾಗಿ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ.

ಬೀಜಿಂಗ್ನಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಅಂಕ್ಸಿನ್ ಕೌಂಟಿಯನ್ನು ಮುಚ್ಚಲಾಗುವುದು ಹಾಗೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಒಳಪಡಿಸ ಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News