ದೇಶದ ಸಾಂಪ್ರದಾಯಿಕ ಒಳಾಂಗಣ ಆಟಗಳನ್ನು ಹೊಸ, ಆಕರ್ಷಕ ಅವತಾರದಲ್ಲಿ ಪ್ರದರ್ಶಿಸಿ: ಪ್ರಧಾನಿ ಮೋದಿ ಕರೆ

Update: 2020-06-29 04:27 GMT

ಹೊಸದಿಲ್ಲಿ: ಭಾರತದ ಸಾಂಪ್ರದಾಯಿಕ ಒಳಾಂಗಣ ಆಟಗಳನ್ನು ನಾವು ಹೊಸ, ಆಕರ್ಷಕ ಅವತಾರದಲ್ಲಿ ಪ್ರದರ್ಶಿಸಬೇಕು. ಈ ವಲಯದಲ್ಲಿ ಸ್ಟಾರ್ಟ್-ಅಪ್ಸ್‌ನ ಅಪೂರ್ವ ಅವಕಾಶವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರವಿವಾರ ಕರೆ ನೀಡಿದರು.

‘‘ನಾವು ಭಾರತದ ಸಾಂಪ್ರದಾಯಿಕ ಒಳಾಂಗಣ ಆಟಗಳನ್ನು ಹೊಸ ಆಕರ್ಷಕ ಅವತಾರದಲ್ಲಿ ಪ್ರಸ್ತುತಪಡಿಸಬೇಕಾಗಿದೆ. ಈ ಆಟಗಳಿಗೆ ಸಂಬಂಧಿಸಿದ ಮೂಲಗಳನ್ನು ಸಜ್ಜುಗೊಳಿಸುವವರು, ಈ ಸಾಂಪ್ರದಾಯಿಕ ಒಳಾಂಗಣ ಆಟಗಳಿಗೆ ಸಂಬಂಧಿಸಿದ ಪೂರೈಕೆದಾರರು ಹಾಗೂ ಸ್ಟಾರ್ಟ್ ಅಪ್ಸ್‌ಗಳು ಹೆಚ್ಚು ಜನಪ್ರಿಯವಾಗಲಿದೆ. ನಮ್ಮ ಭಾರತೀಯ ಕ್ರೀಡೆಗಳು ಸ್ಥಳೀಯವಾದವು ಎಂದು ನಾವು ನೆನಪಿಟ್ಟುಕೊಳ್ಳಬೇಕು. ಸ್ಥಳೀಯ ಕ್ರೀಡೆಗೆ ಇನ್ನಷ್ಟು ಪ್ರಚಾರ ನೀಡಬೇಕೆಂದು ನಾವು ಈಗಾಗಲೇ ವಿನಂತಿಸಿದ್ದೇವೆ’’ ಎಂದು ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಹೇಳಿದರು.

 ‘‘ಸ್ನೇಹಿತರೆ, ನಮ್ಮ ದೇಶ ಸಾಂಪ್ರದಾಯಿಕ ಕ್ರೀಡೆಗಳ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದೆ. ಉದಾಹರಣೆಗೆ ನೀವು ‘ಪಚಿಸಿ’ ಎಂಬ ಆಟದ ಹೆಸರನ್ನು ಕೇಳಿರಬಹುದು. ಈ ಆಟವನ್ನು ತಮಿಳುನಾಡಿನಲ್ಲಿ ‘ಪಲ್ಲಂಗುಲಿ’ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ‘ಅಳಿಗುಳಿ ಮನೆ’ ಹಾಗೂ ಆಂಧ್ರಪ್ರದೇಶದಲ್ಲಿ ‘ವಾಮನ್‌ಗುಂಟ್ಲು’ ಎಂದು ಕರೆಯಲಾಗುತ್ತದೆ. ಈ ಆಟವು ದಕ್ಷಿಣ ಭಾರತದಿಂದ ಆಗ್ನೇಯ ಏಷ್ಯಾಕ್ಕೆ, ವಿಶ್ವದ ಇತರ ಭಾಗಗಳಿಗೆ ಹರಡಿತು ಎಂದು ಹೇಳಲಾಗುತ್ತಿದೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News