ಕಾರ್ಕಳ : ತುಳುನಾಡ ಒಕ್ಕೂಟ, ಹ್ಯೂಮ್ಯಾನಿಟಿ ಫೋರಮ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Update: 2020-06-29 10:29 GMT

ಕಾರ್ಕಳ: ಒಬ್ಬ ವ್ಯಕ್ತಿಯನ್ನು ಬದುಕಿಸಿದರೆ ಇಡೀ ಮಾನವ ಸಮೂಹವನ್ನು ಬದುಕಿಸಿದ ಪ್ರತಿಫಲ ಪ್ರಾಪ್ತಿಯಾಗುತ್ತದೆ. ಇನ್ನೊಬ್ಬರನ್ನು ಬದುಕಿಸುವ ರಕ್ತದಾನ ಅತೀ ಶ್ರೇಷ್ಠ ದಾನವಾಗಿದೆ ಎಂದು ತುಳುನಾಡ ಒಕ್ಕೂಟ ಕಾರ್ಕಳದ ಅಧ್ಯಕ್ಷ ಮುಹಮ್ಮದ್ ಹುಸೈನ್ ಸಾಹೆಬ್ ಅವರು ಕುರ್ ಆನ್ ವಚನವನ್ನು ವಿವರಿಸಿದರು.

ತುಳುನಾಡ ಒಕ್ಕೂಟ ಹಾಗೂ ಹ್ಯೂಮ್ಯಾನಿಟಿ ಫೋರಮ್ ಕಾರ್ಕಳ ಇದರ ಸಹಯೋಗದೊಂದಿಗೆ ಕಾರ್ಕಳ ಸಿಟಿ ನರ್ಸಿಂಗ್ ಹೋಮ್‍ನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಕಾರ್ಕಳ ಸಿಟಿ ನರ್ಸಿಂಗ್ ಹೋಮ್‍ನ ಡಾ. ರಿಝ್ವಾನ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಈ ಶಿಬಿರದಲ್ಲಿ ಸುಮಾರು 83 ಮಂದಿ ರಕ್ತದಾನ ಮಾಡಿದರು.

ಶೇಷ್ಠದಾನಗಳಲ್ಲಿ ರಕ್ತದಾನವು ಒಂದಾಗಿದೆ. ಒಬ್ಬ ರಕ್ತದಾನ ಮಾಡುವುದರಿಂದ ಮೂವರ ಜೀವಗಳನ್ನು ರಕ್ಷಿಸಲು ಸಾಧ್ಯವೆಂದು ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಡಾ. ಜೋಷಿ ಹೇಳಿದರು.

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯ ಮುಹಮ್ಮದ್ ಶರೀಫ್, ರೋಟರಿ ಸಮುದಾಯದ ಸೇವಾ ನಿರ್ದೇಶಕ ಮುಹಮ್ಮದ್ ಇಕ್ಬಾಲ್ 71ನೇ ಬಾರಿಗೆ ರಕ್ತದಾನ ಮಾಡಿದರು.

ಮೂಡುಬಿದಿರೆ ತುಳುನಾಡ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು. ತುಳುನಾಡ ಘಟಕದ ಅಧ್ಯಕ್ಷ ಮುಹಮ್ಮದ್ ಹುಸೈನ್  ಸ್ವಾಗತಿಸಿದರು. ಹ್ಯೂಮ್ಯಾನಿಟಿ ಫೋರಮ್ ಅಧ್ಯಕ್ಷ ಮುಹಮ್ಮದ್ ಶಾಕಿರ್ ವಂದಿಸಿದರು. ಈ ಸಂದರ್ಭ ಒಕ್ಕೂಟದ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News