×
Ad

ಜು.20ರವರೆಗೆ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಬೇಡ : ಮುಹಮ್ಮದ್ ಮಸೂದ್ ಮನವಿ

Update: 2020-06-29 20:11 IST

ಮಂಗಳೂರು, ಜೂ.29: ‘ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಜು.20ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್‌ನ್ನು ನಿರ್ವಹಿಸಬಾರದು’ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.

‘ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ನಮ್ಮ ಪರಿಸರದಲ್ಲಿ ಹಲವು ಮಂದಿಗೆ ಸೋಂಕು ತಗುಲಿರುವುದು; ಮೃತಪಟ್ಟಿರುವುದು ವರದಿಯಾಗಿದೆ. ಅಲ್ಲದೆ, ಜಿಲ್ಲಾಧಿಕಾರಿ ಈಗಾಗಲೇ ರಾತ್ರಿ 8ರಿಂದ ಬೆಳಗ್ಗೆ 5ಗಂಟೆಯವರೆಗೆ ಕರ್ಫ್ಯೂ ಹೇರಿದ್ದು, ‘ಇಶಾ’ ಹಾಗೂ ‘ಫಜರ್’ ನಮಾಝ್‌ಗೆ ಮಸೀದಿಗೆ ಹೋಗುವುದನ್ನು ನಿರ್ಬಂಧಿಸಿದ್ದಾರೆ’ ಎಂದರು.

‘ಮಳೆಗಾಲ ಪ್ರಾರಂಭವಾದ್ದರಿಂದ ಡೆಂಗ್, ಮಲೇರಿಯ ವ್ಯಾಪಕವಾಗುವ ಸಾಧ್ಯತೆ ಇದೆ. ತಮ್ಮತಮ್ಮ ಮನೆಗಳ ಪರಿಸರವನ್ನು ಶುಚಿತ್ವವಾಗಿ ಇಟ್ಟುಕೊಳ್ಳಬೇಕು. ಈ ಬಗ್ಗೆ ಜಮಾಅತ್‌ನಲ್ಲಿ ತಿಳಿಸಬೇಕು. ಜಮಾಅತ್ ನಮಾಝಿನ ಬಗ್ಗೆ ಜಾಗ್ರತೆ ವಹಿಸಿ ಸೂಕ್ತ ನಿಲುವು ತಾಳಬೇಕು’ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News