ನೂರ್‌ಜಹಾನ್ ಮನೆ ಬೆಳಗಿದ ಸೋಲಾರ್ ಬೆಳಕು
Update: 2020-06-29 20:12 IST
ಮಂಗಳೂರು. ಜೂ.29: ಪಾವೂರು ಗ್ರಾಮದ ಇನೋಳಿಯ ನೂರ್‌ಜಹಾನ್ ತಮ್ಮ ಹೊಸ ಮನೆಗೆ ಸುಸ್ಥಿರ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಿ ಸೋಲಾರ್ ಮನೆಯನ್ನಾಗಿ ಮಾಡಿದ್ದಾರೆ.
ಜನಶಿಕ್ಷಣ ಟ್ರಸ್ಟ್, ಸೆಲ್ಕೋ ಪೌಂಡೇಶನ್‌ನ ಸಹಬಾಗಿತ್ವದಲ್ಲಿ ಸೋಲಾರ್ ಗ್ರಾಮ ಅಭಿಯಾನದಿಂದ ಪ್ರೇರೇಪಿತರಾದ ಕುಟುಂಬವು ಸುಮಾರು 43 ಸಾವಿರ ರೂ. ವೆಚ್ಚದಲ್ಲಿ ಎಂಟು ಸೋಲಾರ್ ದೀಪ ಹಾಗೂ ಪ್ಯಾನ್ ಅಳವಡಿಸಿದೆ. ಈ ಕುಟುಂಬವು ಬೆಳಕಿನ ಸ್ವಾವಲಂಬನೆ, ವಿದ್ಯುತ್ ಉಳಿತಾಯ, ಹಣದ ಉಳಿತಾಯ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.