×
Ad

ಉಡುಪಿ: ಜು.1ಕ್ಕೆ ವೈದ್ಯರ ದಿನಾಚರಣೆ

Update: 2020-06-29 20:32 IST

ಉಡುಪಿ, ಜೂ.29: ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ವತಿಯಿಂದ ಜು.1ರಂದು ಭಾರತರತ್ನ ಡಾ.ಬಿ.ಸಿ.ರಾಯ್ ಸ್ಮರಣಾರ್ಥ ವೈದ್ಯರ ದಿನಾಚರಣೆ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಐಎಂಎ ಭವನದಲ್ಲಿ ನಡೆಯಲಿದೆ.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಉಡುಪಿಯ ಖ್ಯಾತ ಶಸ್ತ್ರಚಿಕಿತ್ಸಾ ತಜ್ಞ ರಾದ ಡಾ.ವಾಸುದೇವ ಸೋಮಯಾಜಿ ಹಾಗೂ ಕಟಪಾಡಿಯ ಜನಪ್ರಿಯ ವೈದ್ಯರಾದ ಡಾ.ಶ್ರೀನಿವಾಸ ರಾವ್ ಕೊರಡ್ಕಲ್ ಇವರನ್ನು ಸನ್ಮಾನಿಸಲಾ ಗುವುದು. ಅಲ್ಲದೇ ಐಎಂಎ ರಾಜ್ಯಘಟಕ ಕೊಡಮಾಡುವ ಡಾ.ಬಿ.ಸಿ.ರಾಯ್ ಪ್ರಶಸ್ತಿ ವಿಜೇತ ಡಾ.ಪ್ರಭಾಕರ ಶೆಟ್ಟಿ ಕಾಪು ಇವರನ್ನು ಸಹ ಗೌರವಿಸಲಾಗುವುದು.

ಉಡುಪಿ ಐಎಂಎ ಅಧ್ಯಕ್ಷ ಡಾ.ಉಮೇಶ ಪ್ರಭು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ 16 ಮಂದಿ ಐಎಂಎ ಸದಸ್ಯರನ್ನು ಸಹ ಗೌರವಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಕಾಯದರ್ಶಿ  ಡಾ.ಪ್ರಕಾಶ್ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News