×
Ad

ಐಸಿಎಐನಿಂದ ನಿಟ್ಟೂರು ಪ್ರೌಢಶಾಲೆಗೆ ಕೊಡುಗೆ

Update: 2020-06-29 20:43 IST

ಉಡುಪಿ, ಜೂ.29: ಲೆಕ್ಕಪರಿಶೋಧಕರ ದಿನಾಚರಣೆಯ ಪ್ರಯುಕ್ತ ಉಡುಪಿಯ ಐಸಿಎಐ ಶಾಖೆ ವತಿಯಿಂದ ಸುವರ್ಣಪರ್ವ ಆಚರಿಸುತ್ತಿರುವ ನಿಟ್ಟೂರು ಪ್ರೌಢಶಾಲೆಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಈ ಕನ್ನಡ ಮಾಧ್ಯಮ ಶಾಲೆಯನ್ನು ಪ್ರೋತ್ಸಾಹಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಹಾಗೂ ಶಾಲೆಯ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಿ.ಎ.ಪ್ರದೀಪ್ ಜೋಗಿ ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿದರು. ಅಲ್ಲದೆ ಶಾಲೆ ಹಮ್ಮಿಕೊಂಡ 50 ಎಕ್ರೆ ಹಡಿಲು ಗದ್ದೆ ಬೇಸಾಯ ಮಾಡುವ ಯೋಜನೆಗೆ 25,000 ರೂ.ಮೊತ್ತವನ್ನು ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ, ಶಾಸಕರಾದ ಕೆ.ಘುಪತಿ ಭಟ್‌ರಿಗೆ ಹಸ್ತಾಂತರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಸಂಸ್ಥೆಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News