​ಜೂ.30ರಿಂದ ಜು.5ರವರೆಗೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ಸೇವೆ ಸ್ಥಗಿತ

Update: 2020-06-29 16:11 GMT

ಮಂಗಳೂರು, ಜೂ. 29: ನಗರದಲ್ಲಿನ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಜೂ.30ರಿಂದ ಜು.5ರವರೆಗೆ ಹೊರರೋಗಿ ಹಾಗೂ ಒಳರೋಗಿಗಳ ದಾಖಲಾತಿ ಸೇವೆ ಸ್ಥಗಿತಗೊಳ್ಳಲಿದೆ.

ಆಸ್ಪತ್ರೆಯಲ್ಲಿನ ಹೆಚ್ಚಿನ ವೈದ್ಯರು-ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇರುವುದರಿಂದ ಹಾಗೂ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಫ್ಯೂಮಿಗೇಶನ್ ಹಾಗೂ ಸ್ಯಾನಿಟೈಝೇಶನ್ ಮಾಡುವ ಅಗತ್ಯವಿದೆ. ರೋಗಿಗಳ ಮುಂದಿನ ಚಿಕಿತ್ಸೆಗಾಗಿ ‘ಎಕೆ-ಎಆರ್‌ಕೆ’ ಯೋಜನೆಯಡಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸಲು ಶಿಫಾರಸು ಪತ್ರ ನೀಡಲು ನಿರ್ಧರಿಸಲಾಗಿದೆ.

ಜು. 6ರಿಂದ ಆಸ್ಪತ್ರೆಯು ಎಂದಿನಂತೆಯೇ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಸಹಕರಿಸಬೇಕು. ಈ ಬಗ್ಗೆ ಡಾ. ಶಕುಂತಲಾ ಎಂ. ಅವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824- 2424001ನ್ನು (ಹೆಲ್ಪ್ ಡೆಸ್ಕ್) ಸಂಪರ್ಕಿಸಲು ಲೇಡಿಗೋಶನ್ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News