ಸರಕಾರದ ವಿರುದ್ಧ ಸಿಪಿಎಂ ಭಿತ್ತಿಪತ್ರ ಪ್ರದರ್ಶನ

Update: 2020-06-29 17:27 GMT

ಮಂಗಳೂರು, ಜೂ.29: ಕೊರೋನ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ವೈಫಲ್ಯವನ್ನು ಖಂಡಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಜಿಲ್ಲಾದ್ಯಂತ ಹಮ್ಮಿಕೊಂಡ ಪ್ರತಿಭಟನಾ ಸಪ್ತಾಹದ ಭಾಗ ವಾಗಿ ಸೋಮವಾರ ನಗರದ ಸ್ಟೇಟ್‌ಬ್ಯಾಂಕ್‌ಹಾಗೂ ಲೇಡಿಗೋಷನ್ ಆಸ್ಪತ್ರೆಯ ಬಳಿ ಭಿತ್ತಿಚಿತ್ರ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳು ಮೊದಲ ಆದ್ಯತೆಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದರೆ ಭಾರತವು ಜಾಗತೀಕರಣದ ಕರಿನೆರಳಿನಲ್ಲಿ ಒದ್ದಾಡುತ್ತಿದ್ದು, ಕೇಂದ್ರ ಸರಕಾರವು ಇವೆರಡನ್ನೂ ತೀರಾ ನಿರ್ಲಕ್ಷಿಸಿದ್ದರ ಪರಿಣಾಮ ಕೊರೋನ ವೈರಸ್ಸನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿದೆ. ಜನರ ಜೀವವನ್ನು ರಕ್ಷಿಸಬೇಕಾದ ಸರಕಾರವು ಜನರಲ್ಲಿ ಮೌಢ್ಯತೆಯನ್ನು ತುಂಬಿ ಅಪಪ್ರಚಾರಗಳನ್ನು ನಡೆಸಿ ಇಂತಹ ಸಂಕಷ್ಟದ ಕಾಲದಲ್ಲೂ ಕೋಮುವಿಷ ಬೀಜವನ್ನು ಬಿತ್ತುವ ನೀಚ ಕಾರ್ಯಕ್ಕೆ ಮುಂದಾಗಿದೆ ಎಂದು ಆಪಾದಿಸಿದರು.

ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಿಐಟಿಯು ಮುಖಂಡರಾದ ಮುಹಮ್ಮದ್ ಮುಸ್ತಫಾ, ಸಂತೋಷ್ ಆರ್.ಎಸ್, ಹರೀಶ್ ಪೂಜಾರಿ, ಹಸೈನಾರ್, ಮುಝಾಫರ್, ವಿಜಯ, ಶಿವಪ್ಪ,ಗುಡ್ಡಪ್ಪ, ಸೆಲ್ವರಾಜ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News