‘ಮೇಲ್ತೆನೆ’ ವತಿಯಿಂದ ‘ಗಿಡ ನೆಡಿ’ ಅಭಿಯಾನ

Update: 2020-06-29 17:29 GMT

ಮಂಗಳೂರು, ಜೂ.29: ಮೇಲ್ತೆನೆ - ಬ್ಯಾರಿ ಬರಹಗಾರರು ಮತ್ತು ಕಲಾವಿದರ ಒಕ್ಕೂಟದಿಂದ ‘ಗಿಡ ನೆಡಿ’ ಅಭಿಯಾನವನ್ನು ರವಿವಾರ ದೇರಳಕಟ್ಟೆ ಮತ್ತು ನಾಟೆಕಲ್ ಸುತ್ತಮುತ್ತಲ ಪರಿಸರದಲ್ಲಿ ಉಚಿತವಾಗಿ ಸಸಿಗಳನ್ನು ವಿತರಿಸುವ ಮೂಲಕ ನಡೆಸಲಾಯಿತು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆಗೆ ಮೇಲ್ತೆನೆ ಬ್ಲಾಗ್ ಸಂಪಾದಕ ಇಸ್ಮತ್ ಪಜೀರ್ ನೇರಳೆ ಗಿಡವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮೇಲ್ತೆನೆಯ ಹಿತೈಷಿಗಳಿಗೆ ಅಲ್ಲಲ್ಲಿ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ)ದ ದ.ಕ. ಜಿಲ್ಲಾ ಘಟಕವು ಗಿಡಗಳನ್ನು ನೀಡಿ ಸಹಕರಿಸಿತು. ಸಮಾರೋಪ ಕಾರ್ಯಕ್ರಮವನ್ನು ನಾಟೆಕಲ್-ವಿಜಯನಗರ ಸಬೀಲುರ್ರಶಾದ್ ಇಸ್ಲಾಮಿಕ್ ಟ್ರಸ್ಟ್‌ನ ಆವರಣದಲ್ಲಿ ನಡೆಸಲಾಯಿತು. ಮೇಲ್ತೆನೆ ಅಧ್ಯಕ್ಷ ಹಾಗೂ ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಟಿ.ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಸ್ಮತ್ ಪಜೀರ್ ಪರಿಸರ ರಕ್ಷಣೆಯ ಕುರಿತು ಮಾತನಾಡಿದರು. ಸದಸ್ಯ ಅಶೀರುದ್ದೀನ್ ಮಂಜನಾಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ಕೋಶಾಧಿಕಾರಿ ಬಾಷಾ ನಾಟೆಕಲ್ ವಂದಿಸಿದರು.ಉಪನ್ಯಾಸಕ ಅಬ್ದುಲ್ ಅಝೀಝ್, ಇಸ್ಮಾಯಿಲ್ ಕೆ.ಎಸ್, ಅಬ್ದುಲ್ ಹಕೀಂ ದಾನಿಶ್, ರಝಾಕ್ ಹಾಜಿ ಅಡ್ಡೂರು, ಹಸನಬ್ಬ ಹಾಜಿ, ಇಫಾಝ್ ಜಾಸ್ಮಿನ್, ಸಾಬಿತ್ ರಝಾಕ್ ಹಾಜಿ, ನಿಯಾಝ್ ಇಸ್ಮಾಯಿಲ್, ಇಲ್ಯಾಸ್, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News