ವಿಟ್ಲ ಎಸ್ಸೆಸ್ಸೆಫ್ ವತಿಯಿಂದ ರಕ್ತದಾನ ಶಿಬಿರ

Update: 2020-06-29 17:53 GMT

ವಿಟ್ಲ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವ್ಯಾಪ್ತಿಯ ಎರಡು ಸ್ಥಳಗಳಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಇದರ 156ನೇ ಕ್ಯಾಂಪ್ ವಿಟ್ಲ ದ ಸರಕಾರಿ ಆಸ್ಪತ್ರೆಯಲ್ಲಿ "ರೆಡ್ ಕ್ರಾಸ್ ಸೊಸೈಟಿ  ಹಾಗೂ ಲೇಡಿಗೋಶನ್ ಆಸ್ಪತ್ರೆ  ಮಂಗಳೂರು" ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ವಿಟ್ಲ ಹಾಗೂ ಮಂಗಲಪದವು ಸೆಕ್ಟರ್ ವತಿಯಿಂದ ನಡೆದಿದ್ದು, ಒಟ್ಟು 88 ಯುನಿಟ್ ರಕ್ತ ಸಂಗ್ರಹವಾಗಿದೆ ಹಾಗೂ ಬ್ಲಡ್ ಸೈಬೋ ಇದರ 157ನೇ ಕ್ಯಾಂಪ್ ಉಕ್ಕುಡ ಮಹಿಳಾ ಶರೀಅತ್ ಕಾಲೇಜಿನಲ್ಲಿ "ಯೇನಪೋಯ ಆಸ್ಪತ್ರೆ, ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ವಿಟ್ಲ ಸೌತ್ ಸೆಕ್ಟರ್ ಹಾಗೂ ಕನ್ಯಾನ ಸೆಕ್ಟರ್ ವತಿಯಿಂದ ನಡೆದಿದ್ದು, ಒಟ್ಟು 92 ಯುನಿಟ್ ರಕ್ತ ಸಂಗ್ರಹವಾಗಿದೆ.

ಕ್ಯಾಂಪ್ ನಡೆದ ಎರಡೂ ಸ್ಥಳಗಳಿಗೆ ಬ್ಲಡ್ ಸೈಬೋ ನಾಯಕರು ಗಳಾದ ಕರೀಮ್ ಕದ್ಕಾರ್ ಬೋಳಂತೂರು, ಇಮ್ರಾನ್ ರೆಂಜಲಾಡಿ, ಹಂಝ ಮಂಚಿ, ರಝಾಕ್ ಬೈರಿಕಟ್ಟೆ ಹಾಗೂ ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಹಾಜಿ ಬೈರಿಕಟ್ಟೆ, ಜಿಲ್ಲಾ ಸದಸ್ಯರಾದ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು, ವಿಟ್ಲ ಡಿವಿಷನ್ ಅಧ್ಯಕ್ಷರಾದ ಅಬೂಬಕ್ಕರ್ ಹಿಮಮಿ ಸಖಾಫಿ, ನಾಯಕರಾದ ಅಬ್ದುಲ್ ಖಾದರ್ ಕೊಡಂಗಾಯಿ, ಜಲೀಲ್ ಒಕ್ಕೆತ್ತೂರು, ಅಶ್ಫಾಕ್ ಟಿಪ್ಪುನಗರ ಮೊದಲಾದವರು ಭೇಟಿ ನೀಡಿ ಶುಭಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News