ಜು.1ರಿಂದ ಉಡುಪಿ ಹಶಿಮಿ ಮಸೀದಿಯಲ್ಲಿ ನಮಾಝ್ ಗೆ ಅವಕಾಶ

Update: 2020-06-30 04:34 GMT
ಸಾಂದರ್ಭಿಕ ಚಿತ್ರ

ಉಡುಪಿ : ಬ್ರಹ್ಮಗಿರಿ ನಾಯರ್ ಕೆರೆ ಬಳಿ ಇರುವ ಹಶಿಮಿ ಮಸೀದಿ ಜು. 1ರಿಂದ (ಬುಧವಾರ) ದೈನಂದಿನ ಪ್ರಾರ್ಥನೆಗಾಗಿ ತೆರೆಯಲಾಗುವುದು.

ಚಾಲ್ತಿಯಲ್ಲಿರುವ ಕರ್ಫ್ಯೂ ರವಿವಾರ ಪೂರ್ಣ ದಿನ ಮತ್ತು ಪ್ರತಿದಿನ ರಾತ್ರಿ 8 ರಿಂದ ಮುಂಜಾನೆ 5 ರವರೆಗೆ ವಿಧಿಸಲಾಗಿರುವುದರಿಂದ ಮಸೀದಿ ರವಿವಾರ ಮತ್ತು ಫಜ್ರ್ ಮತ್ತು ಇಶಾಗಳಲ್ಲಿ ಮುಚ್ಚಲ್ಪಡುತ್ತದೆ. ಹಿರಿಯ ನಾಗರಿಕರು, ಹೆಂಗಸರು ಮತ್ತು ಮಕ್ಕಳಿಗೆ ಮನೆಯಲ್ಲೇ ಇರಲು ಕೋರಲಾಗಿದೆ. 

ಎಲ್ಲಾ ಇತರ ನಿಯಮಗಳು ಮತ್ತು ಷರತ್ತುಗಳು ರಾಜ್ಯ ಆಡಳಿತ ನೀಡಿದ ಮಾರ್ಗಸೂಚಿಗಳ ಪ್ರಕಾರ ಅನ್ವಯಿಸುತ್ತವೆ ಎಂದು ಅಧ್ಯಕ್ಷ ಜಕ್ರಿಯಾ ಅಸ್ಸಾದಿ ಮತ್ತು ನಿರ್ವಹಣಾ ಸಮಿತಿಯ ಸಾರ್ವಜನಿಕ ಸಂಪರ್ಕ ಎಂ.ಇಕ್ಬಾಲ್ ಮನ್ನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News