ಹೆಚ್ಚುತ್ತಿರುವ ಕೊರೋನ, ಎಚ್ಚರ ವಹಿಸುವುದು ಅಗತ್ಯ : ದ.ಕ. ಜಿಲ್ಲಾ ಎಸ್ಕೆಎಸ್ಸಸ್ಸೆಫ್

Update: 2020-06-30 05:39 GMT

ಮಂಗಳೂರು : ಜಗತ್ತನ್ನೇ ಕಾಡುತ್ತಿರುವ ಕೊರೋನ ವೈರಸ್ ನ ರುದ್ರ ನರ್ತನ ಇದೀಗ ಹೆಚ್ಚಾಗಿದ್ದು ದೈನಂದಿನ ನಮ್ಮ ರಾಷ್ಟ್ರ ಹಾಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ವೇಗದಲ್ಲಿ ಮುಂದುವರಿಯುತ್ತಿದ್ದು ಇದರ ನಿಯಂತ್ರಣಕ್ಕೆ  ಸರಕಾರ ಹಾಗೂ ಜನತೆ ಇನ್ನಷ್ಟು ಎಚ್ಚರ ವಹಿಸಬೇಕು, ಇಲ್ಲದಿದ್ದಲ್ಲಿ ಮುಂದಕ್ಕೆ ನಾವು ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ದ.ಕ. ಜಿಲ್ಲಾ ಎಸ್ಕೆಎಸ್ಸಸ್ಸೆಫ್ ಅಭಿಪ್ರಾಯಿಸಿದೆ.

ಇದೀಗ ವೈರಸ್ ನಗರದಿಂದ ಗ್ರಾಮೀಣ ಪ್ರದೇಶಕ್ಕೂ ಆವರಿಸಿದ್ದು ಜನರು ಈ ಬಗ್ಗೆ ಎಚ್ಚರ ವಹಿಸದೆ ನಿರ್ಲಕ್ಷ್ಯ ತೋರಿದರೆ ಮುಂದೆ ನೂರಾರು ಮಂದಿಯ ಪ್ರಾಣಕ್ಕೆ ಅಪಾಯವಾಗಬಹುದು.

ಮುಂದಿನ ಕೆಲ ದಿನಗಳಲ್ಲಿ ಸರಕಾರ ಮತ್ತೊಮ್ಮೆ ಲಾಕ್ ಡೌನ್ ಮಾಡಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುವುದು ಅಥವಾ ಜನರು ಸ್ವಯಂ ಪ್ರೇರಿತ ಲಾಕ್ ಡೌನ್ ಮಾಡಿಕೊಂಡು ಸರಕಾರ ಮತ್ತು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ ಎಚ್ಚರ ವಹಿಸವುದು ಅಗತ್ಯ.  ಈ ಬಗ್ಗೆ ಸಮುದಾಯದ ನಾಯಕರು ಹಾಗೂ ಮೊಹಲ್ಲಾ ಸಮಿತಿಗಳು ಸಾಧ್ಯವಾದ ರೀತಿಯಲ್ಲಿ ಜನ ಜಾಗೃತಿ ಮೂಡಿಸಬೇಕು ಹಾಗೂ ಈ ಮಾರಕ ವೈರಸ್ ನಿಂದ ರಕ್ಷಣೆಗಾಗಿ  ಪ್ರತಿಯೊಬ್ಬರು ಆರಾಧನೆ, ಪ್ರಾರ್ಥನೆಗಳನ್ನು ಹೆಚ್ಚಿಸಬೇಕೆಂದು ದ.ಕ‌. ಜಿಲ್ಲಾ ಎಸ್ಕೆಎಸ್ಸಸ್ಸೆಫ್ ಅಧ್ಯಕ್ಷರಾದ ಸೈಯದ್ ಅಮೀರ್ ತಂಙಳ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News