ಭಾರತದಲ್ಲಿ ಆ್ಯಪ್ ‍ಗಳ ನಿಷೇಧ: ತೀವ್ರ ಆತಂಕ ವ್ಯಕ್ತಪಡಿಸಿದ ಚೀನಾ

Update: 2020-06-30 08:48 GMT

ಹೊಸದಿಲ್ಲಿ: ರಾಷ್ಟ್ರದ ಭದ್ರತೆ ಹಾಗೂ ದತ್ತಾಂಶ ಸೋರಿಕೆ ಕಾರಣಗಳನ್ನು ನೀಡಿ ಭಾರತ ಸರಕಾರ 59 ಚೀನಿ ಆ್ಯಪ್ ‍ಗಳಿಗೆ ನಿಷೇಧ ಹೇರಿದ ಬೆನ್ನಿಗೇ ಪ್ರತಿಕ್ರಿಯಿಸಿರುವ ಚೀನಾ ಈ ಬೆಳವಣಿಗೆಯ ಬಗ್ಗೆ ‘ತೀವ್ರ ಆತಂಕ’ ವ್ಯಕ್ತಪಡಿಸಿದೆಯಲ್ಲದೆ ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿರುವುದಾಗಿ ತಿಳಿಸಿದೆ. ಈ ಕುರಿತಂತೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿಕೆ ನೀಡಿದ್ದಾರೆ.

ಭಾರತ ಸರಕಾರ ಸೋಮವಾರ ಸಂಜೆ ನಿಷೇಧ ಹೇರಿದ ಆ್ಯಪ್‍ಗಳಲ್ಲಿ ಜನಪ್ರಿಯ ವೀಡಿಯೋ ಶೇರಿಂಗ್ ಆ್ಯಪ್ ಟಿಕ್ ಟಾಕ್ ಹಾಗೂ  ವಿ ಚಾಟ್ ಸೇರಿವೆ. ಭಾರತ ಮತ್ತು ಚೀನಾ ನಡುವೆ ಲಡಾಖ್ ಸಮೀಪ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಈ ತಿಂಗಳು ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಹುತಾತ್ಮರಾದ ಘಟನೆಯ ನಂತರ ತಲೆದೋರಿರುವ ಉದ್ವಿಗ್ನ ವಾತಾವರಣದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News