ಅವಕಾಶ ಬಳಸಿಕೊಂಡರೆ ನಾಯಕರಾಗಿ ಮೂಡಿಬರಲು ಸಾಧ್ಯ: ಮಂಜುನಾಥ ಭಂಡಾರಿ

Update: 2020-06-30 15:08 GMT

ಉಡುಪಿ, ಜೂ.30: ಯುವಕರು ಅವಕಾಶಗಳನ್ನು ಬಳಸಿಕೊಂಡು ನಾಯಕ ರಾಗುವ ಮೂಲಕ ರಾಜಕೀಯದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಕೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜು.2ರಂದು ನಡೆಯಲಿ ರುವ ಪ್ರತಿಜ್ಞಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಉಡುಪಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಕಾರ್ಯಾಗಾರವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರತಿಜ್ಞಾ ಕಾರ್ಯಕ್ರಮವನ್ನು ಸಂಘಟಿಸುವುದು ಯುವ ಕಾರ್ಯಕರ್ತರ ಜವಾಬ್ದಾರಿ ಅಲ್ಲ. ಅದೊಂದು ನಾಯಕರಾಗಿ ಮೂಡಲು ಒದಗಿ ಬಂದಿರುವ ಅವಕಾಶವಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳುವುದರ ಮೇಲೆ ಯುವಕರ ಭವಿಷ್ಯ ನಿಂತಿದೆ. ಗ್ರಾಪಂ, ತಾಪಂ, ಜಿಪಂ ಸದಸ್ಯರಾಗಬೇಕಾದರೆ ಮೊದಲು ನೀವು ನಾಯಕರಾಗಿ ಮೂಡಿಬರಬೇಕು ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಸರಕಾರ ದೇಶದ ಯುವ ಸಮುದಾಯಕ್ಕೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಈ ಬಗ್ಗೆ ಯುವ ಸಮುದಾಯ ಚಿಂತನೆ ಮಾಡಬೇಕು. ಬಿಜೆಪಿಯ ಜನವಿರೋಧಿ ನೀತಿಯನ್ನು ಜನರಿಗೆ ತಿಳಿ ಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್.ಸಭಾಪತಿ, ಮುಖಂಡರಾದ ನವೀನ್ ಡಿಸೋಜ, ರವಿಶಂಕರ್ ಶೇರಿಗಾರ್, ಉಮ್ಮರ್ ಫಾರೂಕ್, ದೀಪಕ್ ಕೋಟ್ಯಾನ್, ಹರೀಶ್ ಕಿಣಿ, ದಿನೇಶ್ ಕೋಟ್ಯಾನ್, ವಸಂತ ಬೆರ್ನಾಡ್, ಪ್ರಖ್ಯಾತ್ ಶೆಟ್ಟಿ, ವಿನಯ ರಾಜ್, ಅನಿಲ್ ಕುಮಾರ್, ಹಬೀಬ್ ಅಲಿ ಮೊದಲಾದವರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News