ಜು.6ರಿಂದ ಉಡುಪಿಯ ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆಸಲು ನಿರ್ಧಾರ

Update: 2020-06-30 15:21 GMT

ಉಡುಪಿ, ಜೂ.30: ಕೋವಿಡ್- 19 ಲಾಕ್‌ಡೌನ್‌ನಿಂದಾಗಿ ಕಳೆದ 100 ದಿನಗಳಿಂದ ಬಂದ್ ಆಗಿರುವ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ, ಜುಲೈ 6ರಿಂದ ಸಾಮೂಹಿಕ ಪೂಜೆ, ಆರಾಧನೆಗಳಲ್ಲಿ ಪಾಲ್ಗೊಳ್ಳಲು ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಉಡುಪಿ ಕಥೋಲಿಕ ಧರ್ಮಾಧ್ಯಕ್ಷರ ನಿವಾಸದಲ್ಲಿ ಜೂ.30ರಂದು ಉಡುಪಿ ಯುನೈಟೆಡ್ ಕ್ರಿಶ್ಚನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್‌ನ ನಾಯಕರು ಸಭೆ ಸೇರಿ ಈ ಕುರಿತು ಚರ್ಚಿಸಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಆಗಸ್ಟ್ 2ರವರೆಗಿನ ರವಿವಾರಗಳಲ್ಲಿ ಲಾಕ್‌ಡೌನ್ ಇರುವುದರಿಂದ ರವಿವಾರದ(ಶನಿವಾರ ಸಂಜೆಯನ್ನು ಸೇರಿಸಿ) ಪೂಜೆ, ಆರಾಧನೆಗಳನ್ನು ನಡೆಸು ವುದು ಸಾದ್ಯವಿಲ್ಲ. ವಾರದ ದಿನಗಳಲ್ಲಿ ಸರಕಾರ ನೀಡಿದ ಎಲ್ಲಾ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪೂಜೆ, ಆರಾಧನೆಗಳನ್ನು ನಡೆಸಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿವಿಧ ಕಾಲಕ್ಕೆ ಸರಕಾರ ಹಾಗೂ ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಂಟೈನ್‌ಮೆಂಟ್ ವಲಯದಲ್ಲಿ ಬರುವ ಚರ್ಚ್ ಗಳು ಪರಿಸ್ಥಿತಿ ತಿಳಿಯಾಗುವವರೆಗೆ ಕಾದು, ಅನಂತರ ಚರ್ಚಿನ ಭಕ್ತಾಧಿ ಗಳೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸಬೇಕು ಎಂದು ಉಡುಪಿಯ ಧರ್ಮಾಧ್ಯಕ್ಷ ಹಾಗೂ ಪೋರಂನ ಅಧ್ಯ್ಷ ಡಾ.ಜೆರಾಲ್ಡ್ ಲೋಬೊ ತಿಳಿಸಿದ್ದಾರೆ.

ಸಭೆಯಲ್ಲಿ ಉಡುಪಿ ಕಥೋಲಿಕ ಧರ್ಮಪ್ರಾಂತ, ಚರ್ಚ್ ಆಫಂ ಸೌತ್ ಇಂಡಿಯ(ಸಿಎಸ್‌ಐ), ಯುನೈಟೆಡ್ ಬಾಸೆಲ್ ಮಿಷನ್ ಚರ್ಚಸ್ (ಯುಬಿಎಂ), ಪುಲ್ ಗೊಸ್ಪೆಲ್ ಪಾಸ್ಟರ್ಸ್‌ ಅಸೋಸಿಯೇಶನ್ ಹಾಗೂ ಇತರ ಕ್ರೈಸ್ತ ಸಭೆಗಳ ಧಾರ್ಮಿಕ ನಾಯಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News