ಕಾಸರಗೋಡು ಜಿಲ್ಲೆಯಲ್ಲಿ 7 ಮಂದಿಗೆ ಕೋವಿಡ್ ಪಾಸಿಟಿವ್

Update: 2020-06-30 15:26 GMT

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 7 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ ಮೂವರು ವಿದೇಶದಿಂದ, ಮೂವರು ಇತರ ರಾಜ್ಯಗಳಿಂದ ಬಂದವರು. ಒಬ್ಬರಿಗೆ ಸಂಪರ್ಕ ಮೂಲಕ ಕೋವಿಡ್ ಖಚಿತಗೊಂಡಿದೆ. 4 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

ವಿದೇಶದಿಂದ ಬಂದವರು

ಸೋಂಕು ಖಚಿತಗೊಂಡವರಲ್ಲಿ ಒಮನ್ ನಿಂದ ಬಂದಿದ್ದ ಕುಂಬಳೆ ಪಂಚಾಯತ್ ನ 45 ವರ್ಷದ ವ್ಯಕ್ತಿ, ದುಬೈಯಿಂದ ಆಗಮಿಸಿದ್ದ ಪನತ್ತಡಿ ಪಂಚಾಯತ್ ನ 35 ವರ್ಷದ ನಿವಾಸಿ, ಕತರ್ ನಿಂದ ಬಂದಿದ್ದ ಕುಂಬಳೆ ಪಂಚಾಯತ್ ನ 36 ವರ್ಷದ ನಿವಾಸಿ ಇದ್ದಾರೆ.

ಇತರ ರಾಜ್ಯಗಳಿಂದ ಬಂದವರು

ದಿಲ್ಲಿಯಿಂದ ಆಗಮಿಸಿದ್ದ ಮಡಿಕೈ ಗ್ರಾಮಪಂಚಾಯತ್ ನ 27 ವರ್ಷದ ನಿವಾಸಿ, ಬೆಂಗಳೂರಿನಿಂದ ಬಂದಿದ್ದ ಬದಿಯಡ್ಕ ಗ್ರಾಮ ಪಂಚಾಯತ್ ನ 22, 40 ವರ್ಷದ ನಿವಾಸಿಗಳು ಸೇರಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News