ಹುಷಾರ್.. ಇವೂ ಕೋವಿಡ್-19 ಲಕ್ಷಣ ಇರಬಹುದು...

Update: 2020-07-01 04:10 GMT

ಮುಂಬೈ : ಕಫ, ನೆಗಡಿ ಅಥವಾ ಜ್ವರ ಮಾತ್ರವಲ್ಲದೇ ತೀವ್ರ ಬೆನ್ನು ನೋವು, ಹೊಟ್ಟೆನೋವು, ವಾಕರಿಕೆ, ಹಿಮ್ಮಡಿ ನೋವು ಹಾಗೂ ಗುಳ್ಳೆಗಳು ಕೂಡಾ ಕೋವಿಡ್-19 ಸೋಂಕಿನ ಲಕ್ಷಣಗಳಾಗಿರಬಹುದು ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ಕೋವಿಡ್-19 ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ, ಅತಿಸಾರ ಸಾಮಾನ್ಯವಾಗಿ ಸೋಂಕಿತರಲ್ಲಿ ಕಂಡುಬರುತ್ತಿದೆ. ಈ ಹಿಂದೆ ಮಧುಮೇಹದ ಸಮಸ್ಯೆ ಇಲ್ಲದಿದ್ದರೂ ಏಕಾಏಕಿ 400 ಡಿಎಲ್/ಗ್ರಾಂನಷ್ಟು ಸಕ್ಕರೆ ಅಂಶ ಕಂಡು ಬರುವುದು ಕೂಡಾ ಅಪಾಯದ ಸೂಚನೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ವೈದ್ಯರು ಅಸಾಮಾನ್ಯ ರೋಗಲಕ್ಷಣಗಳಾದ ದೇಹದಲ್ಲಿ ನೋವಿನಂಥ ಸಮಸ್ಯೆಯನ್ನೂ ಕಾಣುತ್ತಿದ್ದಾರೆ. ಕೆಲವರಿಗೆ ಮೊಣಕಾಲಿನ ಸುತ್ತ ಮತ್ತು ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ ಎಂದು ರಾಜ್ಯ ಸರ್ಕಾರದ ಕೋವಿಡ್-19 ಕಾರ್ಯಪಡೆಯ ಸದಸ್ಯ ಡಾ. ಶಶಾಂಕ್ ಜೋಶಿ ಅಭಿಪ್ರಾಯಪಡುತ್ತಾರೆ.

200ಕ್ಕೂ ಹೆಚ್ಚು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿ ಬಳಿಕ ವೈರಸ್ ಸೋಂಕಿಗೆ ಒಳಗಾದ ಹಿರಿಯ ವೈದ್ಯ ಡಾ.ಜಲೀಲ್ ಪಾರ್ಕರ್ ಹೇಳುವಂತೆ ಅವರಿಗೆ ಮೊದಲು ಬೆನ್ನು ನೋವಿನ ಸಮಸ್ಯೆಯಷ್ಟೇ ಕಾಣಿಸಿಕೊಂಡಿತ್ತು.

ಸೋಮಾರ ಅಮೆರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ), ಕೊರೋನ ಸೋಂಕಿನ ಲಕ್ಷಣಗಳ ಪಟ್ಟಿಗೆ ಮೂರು ಹೊಸ ಲಕ್ಷಣಗಳನ್ನು ಸೇರಿಸಿದೆ. ಅವುಗಳೆಂದರೆ ಮೂಗಿನಲ್ಲಿ ಸ್ರಾವ, ಮೂಗುಗಟ್ಟುವಿಕೆ, ವಾಕರಿಕೆ ಅಥವಾ ವಾಂತಿ ಮತ್ತು ಅತಿಸಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News