ವನಿತೆಯರ ಇಂಡಿಯನ್ ಓಪನ್ ಗಾಲ್ಫ್ ಟೂರ್ನಿ ರದ್ದು

Update: 2020-07-01 05:53 GMT

ಗುರುಗ್ರಾಮ: ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಕ್ಕೆ ವನಿತೆಯರ ಇಂಡಿಯನ್ ಓಪನ್ ಗಾಲ್ಫ್ ಟೂರ್ನಮೆಂಟ್‌ನ್ನು ಮಂಗಳವಾರ ರದ್ದುಪಡಿಸಲಾಗಿದೆ.

 2010ರಲ್ಲಿ ಲೇಡಿಸ್ ಯುರೋಪಿಯನ್ ಟೂರ್‌ನಿಂದ ನಿರ್ಧರಿತವಾಗಿರುವ ಗಾಲ್ಫ್ ಟೂರ್ನಮೆಂಟ್ ಈ ವರ್ಷದ ಅಕ್ಟೋಬರ್‌ಗೆ ನಿಗದಿಯಾಗಿತ್ತು. ಇದೀಗ ಟೂರ್ನಿಯು 2021ರ ಅಕ್ಟೋಬರ್‌ನಲ್ಲಿ ಗುರುಗ್ರಾಮದಲ್ಲಿರುವ ಡಿಎಲ್‌ಎಫ್ ಗಾಲ್ಫ್ ಹಾಗೂ ಕಂಟ್ರಿ ಕ್ಲಬ್‌ನಲ್ಲಿರುವ ಗ್ಯಾರಿ ಪ್ಲೇಯರ್ ಕೋರ್ಸ್‌ನಲ್ಲಿ ನಡೆಯಲಿದೆ.

ಆರೋಗ್ಯ ಹಾಗೂ ಸುರಕ್ಷತೆ ಕಾಯ್ದುಕೊಳ್ಳುವುದು ಉನ್ನತ ಆದ್ಯತೆಯಾಗಿದೆ. ಇಂತಹ ನಿರ್ಧಾರವು ಅತ್ಯಗತ್ಯವಾಗಿದೆ ಎಂದು ಲೇಡೀಸ್ ಯುರೋಪಿಯನ್ ಟೂರ್ ಹಾಗೂ ಮಹಿಳೆಯರ ಗಾಲ್ಫ್ ಅಸೋಸಿಯೇಶನ್ ಆಫ್ ಇಂಡಿಯಾ ತಿಳಿಸಿದೆ.

‘‘ಇದೊಂದು ಅತ್ಯಂತ ಕಠಿಣ ನಿರ್ಧಾರ. ಈಗಿನ ಕೊರೋನ ವೈರಸ್ ಸಂದರ್ಭದಲ್ಲಿ ಇದು ಸರಿಯಾದ ನಿರ್ಧಾರವಾಗಿದೆ. ಎಲ್ಲ ಆಟಗಾರರು, ಅಧಿಕಾರಿಗಳು ಹಾಗೂ ಪ್ರೇಕ್ಷಕರ ಆರೋಗ್ಯ ಕಾಪಾಡುವುದು ನಮಗೆ ಅತ್ಯಂತ ಮುಖ್ಯವಾಗಿದೆ. ಡಿಎಲ್‌ಎಫ್, ಕ್ಯಾಸ್ಟ್ರೋಲ್ ಸಹಿತ ಇತರ ಪ್ರಾಯೋಜಕರು ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಮಹಿಳಾ ಇಂಡಿಯಾ ಓಪನ್‌ಗೆ ವಾಪಸಾಗುವ ವಿಶ್ವಾಸವಿದೆ’’ ಎಂದು ಭಾರತದ ಮಹಿಳಾ ಗಾಲ್ಫ್ ಸಂಘಟನೆಯ ಅಧ್ಯಕ್ಷೆ ಕವಿತಾ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News