ಅರವಿಂದ ಡಿಸಿಲ್ವರನ್ನು ವಿಚಾರಣೆ ನಡೆಸಿದ ಶ್ರೀಲಂಕಾ ಪೊಲೀಸರು

Update: 2020-07-01 06:43 GMT

ಕೊಲಂಬೊ, ಜು.1: ಭಾರತದಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಘಟಕದ ಪೊಲೀಸರು ಅರವಿಂದ ಡಿಸಿಲ್ವರನ್ನು ಆರು ಗಂಟೆಗಳ ಕಾಲ ವಿಚಾರಣೆಗೆ ಗುರಿ ಪಡಿಸಿದರು.

2011ರ ವಿಶ್ವಕಪ್‌ನ ವೇಳೆ ಡಿಸಿಲ್ವ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

ಮುಂಬೈನಲ್ಲಿ 2011ರ ವಿಶ್ವಕಪ್ ಫೈನಲ್‌ನಲ್ಲಿ ಆರಂಭಿಕ ಆಟಗಾರನಾಗಿ ಆಡಿದ್ದ ಉಪುಲ್ ತರಂಗರನ್ನು ಪೊಲೀಸರು ಬುಧವಾರ ವಿಚಾರಣೆ ನಡೆಸಿದರು.

ನಾವು ಇಂದು ವಿಶ್ವಕಪ್-2011ರ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿ ಇಂದು ತನಿಖೆಯನ್ನು ಆರಂಭಿಸಿದ್ದೇವೆ. ಕ್ರೀಡೆಗೆ ಸಂಬಂಧಿಸಿ ಹೊಸತಾಗಿ ರಚಿಸಲಾಗಿರುವ ದ ಭ್ರಷ್ಟಾಚಾರ ನಿಗ್ರಹ ಘಟಕ ಶ್ರೀಲಂಕಾದ ಮಾಜಿ ನಾಯಕ ಹಾಗೂ ಮುಖ್ಯ ಆಯ್ಕೆಗಾರ ಸಿಲ್ವರನ್ನು ಪ್ರಶ್ನಿಸುವ ಮೂಲಕ ತನಿಖೆ ಆರಂಭಿಸಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಅರವಿಂದ ಡಿಸಿಲ್ವ ನೀಡಿದ ಹೇಳಿಕೆಯ ಆಧಾರದಲ್ಲಿ ನಾವು 2011ರ ತಂಡದಲ್ಲಿದ್ದ ಆಟಗಾರರಿಗೆ ಸಮನ್ಸ್ ನೀಡಿದ್ದು, ಉಪುಲ್ ತರಂಗ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿ ಜಗತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News