ನರೇಗಾ: ಸಾಧಕ ಗ್ರಾಪಂಗಳಿಗೆ ಉಡುಪಿ ಜಿಪಂ ಅಭಿನಂದನೆ

Update: 2020-07-01 12:37 GMT

ಉಡುಪಿ, ಜು.1: ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದ್ದು, 2020-21ರ ಸಾಲಿನಲ್ಲಿ ಒಟ್ಟು 5.12 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿಯಲ್ಲಿ ಜೂನ್ ಅಂತ್ಯಕ್ಕೆ 1.64 ಲಕ್ಷ ಗುರಿ ಹೊಂದಲಾಗಿತ್ತು. ಆದರೆ ಈ ಸಾಲಿನಲ್ಲಿ ಈವರೆಗೆ 2.88 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಒಟ್ಟು ಗುರಿಗೆ ಶೇ.56.25 ಪ್ರಗತಿ ಸಾಧಿಸಲಾಗಿದೆ. ಜೂನ್ ತಿಂಗಳ ಗುರಿಗೆ ಶೇ.175.60 ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಜೂನ್ ತಿಂಗಳವರೆಗೆ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ ಬಿಲ್ಲಾಡಿ ಗ್ರಾ.ಪಂ (11,111 ಮಾನವ ದಿನಗಳು), ಹಕ್ಲಾಡಿ ಗ್ರಾಪಂ (6817 ಮಾನವ ದಿನಗಳು), ಕಾಡೂರು ಗ್ರಾಪಂ 6035 ಮಾನವ ದಿನಗಳು), ಕಟ್‌ಬೆಲ್ತೂರು ಗ್ರಾಪಂ (5884 ಮಾನವ ದಿನಗಳು), ಕೋಟ ಗ್ರಾಪಂ (5135 ಮಾನವ ದಿನಗಳು), ಕಂದಾವರ ಗ್ರಾಪಂ (5059 ಮಾನವ ದಿನಗಳು) ಇವರಿಗೆ ಹಾಗೂ ಅತೀ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿರುವ ತಾಂತ್ರಿಕ ಸಹಾಯಕ ಅಭಿಯಂತರರಾದ ಓಂಪ್ರಕಾಶ್ ( 48,063 ಮಾನವ ದಿನಗಳು), ಶ್ರೀಜಿತ್ (38,318), ಲೋಕೇಶ್ ( 31022 ಮಾನವ ದಿನಗಳು) ಇವರನ್ನು ಮಂಗಳವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ದಿನಕರ ಬಾಬು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News