ಮಾಹೆ ಮಂಗಳೂರು ಕ್ಯಾಂಪಸ್ ಪ್ರೊ ವೈಸ್ ಚಾನ್ಸಲರ್ ಆಗಿ ಡಾ.ದಿಲೀಪ್ ನಾಯ್ಕ್

Update: 2020-07-01 12:53 GMT

ಮಣಿಪಾಲ, ಜು.1: ಪ್ರಸ್ತುತ ಮಂಗಳೂರಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್‌ನ ಡೀನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ದಿಲೀಪ್ ಜಿ. ನಾಯ್ಕ್ ಅವರನ್ನು ಮಾಹೆಯ ಮಂಗಳೂರು ಕ್ಯಾಂಪಸ್‌ನ ಪ್ರೊ. ವೈಸ್ ಚಾನ್ಸಲರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮಣಿಪಾಲದ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್‌ನಿಂದ 1983ರಲ್ಲಿ ಬಿಡಿಎಸ್ ಪದವಿ ಹಾಗೂ 1986ರಲ್ಲಿಎಂಡಿಎಸ್ ಪದವಿ ಪಡೆದಿರುವ ಇವರು ಎಂಟು ವರ್ಷಗಳ ಕಾಲ ಲಿಬಿಯಾ ದೇಶದ ಅಲ್ ಅರಬ್ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು.

2000ದಲ್ಲಿ ಭಾರತಕ್ಕೆ ಮರಳಿ ಮಂಗಳೂರು ಎಂಕಾಡ್ಸ್‌ನ ಅಸೋಸಿಯೇಟ್ ಡೀನ್ ಆಗಿ ನಿಯುಕ್ತಿಗೊಂಡು 2012ರಲ್ಲಿ ಡೀನ್ ಆಗಿ ಪದೋನ್ನತಿ ಪಡೆದರು. ಆಡಳಿತದಲ್ಲಿ ಎರಡು ದಶಕಗಳ ಅನುಭವ ಪಡೆದಿರುವ ಇವರು, ಮಂಗಳೂರು ಡೆಂಟಲ್ ಕಾಲೇಜನ್ನು ದೇಶದ ಅಗ್ರಗಣ್ಯ ಕಾಲೇಜುಗಳಲ್ಲಿ ಒಂದಾಗಿ ರೂಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News