ಯಲ್ಲಾಪುರಲ್ಲಿ ಮೊದಲ ಕೊರೋನ ಸೋಂಕಿತೆ ಮೃತ್ಯು : ಜಿಲ್ಲಾಧಿಕಾರಿ

Update: 2020-07-01 14:45 GMT

ಕಾರವಾರ : ಕೊರೋನ ಸೋಂಕಿತ ವೃದ್ಧೆಯೊಬ್ಬರು ಯಲ್ಲಾಪುರ ತಾಲೂಕಿನಲ್ಲಿ ಮೃತಪಟ್ಟಿದ್ದು ಪರೀಕ್ಷೆ ನಡೆಸಿದ ಬಳಿಕ ಅವರಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ. ಬುಧವಾರ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶೌಚಾಲಯದಲ್ಲಿ ಅವರು ಕಾಲು ಜಾರಿ ಬಿದ್ದು ಹೃದಯಘಾತದಿಂದ ಮೃತಪಟ್ಟಿದ್ದರು. ಬೇರೆ ರಾಜ್ಯದಿಂದ ಅವರು ಯಲ್ಲಾಪುರಕ್ಕೆ ಹಿಂತಿರುಗಿದ್ದರು. ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಮರಣದ ನಂತರ ಕೊರೋನ ಸೋಂಕು ಇರುವುದು ದೃಢವಾಗಿದೆ ಎಂದು ತಿಳಿಸಿದರು.

ಕೊರೊನಾ ರೋಗ ಲಕ್ಷಣ ಇದ್ದವರು ಸ್ವಯಂ ಪ್ರೇರಿತವಾಗಿ ಮಾಹಿತಿ ನೀಡಬೇಕು. ಇಲ್ಲದರಿಂದ ಕೊರೊನಾ ಸೋಂಕು ನಿಯಂತ್ರಣದಲ್ಲಿ ತೊಡಕಾಗಲಿದೆ. ರೋಗ ಲಕ್ಷಣ ಇಲ್ಲದ ಕೊರೊನಾ ಸೋಂಕಿತರಿಗೆ ತಾಲೂಕಾ ಮಟ್ಟದ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುವುದು. ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದು, ಶಿರಸಿಯಲ್ಲಿ 60-70 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುವುದು. ಹಳಿಯಾಳದಲ್ಲಿ ಕಾರ್ಯಾರಂಭಗೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಎಂ. ರೋಷನ್, ಎಸ್ಪಿ ಶಿವಪ್ರಕಾಶ ದೇವರಾಜು ಇದ್ದರು.

ಕೊರೋನ ಸೋಂಕಿನ ಗುಣಲಕ್ಷಣಗಳು ಇದ್ದರೆ ಯಾವುದೇ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಮಾಡಿಕೊಳ್ಳಿ, ಇದರಿಂದ ಮುಂದೆ ಆಗುವ ತೊಂದ ರೆಯನ್ನು ತಪ್ಪಿಸಬಹುದಾಗಿದೆ. ಸೂಕ್ತ ಮಾಹಿತಿ ನೀಡಿದರೆ ಕೊರೋನ ಸೋಂಕು ಇತರರಿಗೆ ಹರಡುವುದರ ವಿರುದ್ಧ ಕ್ರಮಕೈಗೊಳ್ಳಬಹುದು

-ಡಾ. ಹರೀಶಕುಮಾರ್ ಕೆ. ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News