ನಾಗಲ್ಯಾಂಡ್‌ನ ಪ್ರಕ್ಷುಬ್ಧ ಪ್ರದೇಶ ಸ್ಥಾನಮಾನ ಆರು ತಿಂಗಳ ಅವಧಿಗೆ ವಿಸ್ತರಣೆ

Update: 2020-07-01 16:21 GMT

ಹೊಸದಿಲ್ಲಿ,ಜು.1: ಮುಂದಿನ ಆರು ತಿಂಗಳುಗಳವರೆಗೆ ನಾಗಾಲ್ಯಾಂಡ್ ಅನ್ನು ‘ಪ್ರಕ್ಷುಬ್ಧ ಪ್ರದೇಶ’ವೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. ನಾಗಲ್ಯಾಂಡ್‌ನಲ್ಲಿ ಗಂಭೀರ ಪರಿಸ್ಥಿತಿಯಿರುವುದರಿಂದ ಆ ರಾಜ್ಯದಲ್ಲಿ ಸಶಸ್ತ್ರ ಪಡೆಗಳ ಬಳಕೆ ಅಗತ್ಯವಿದೆಯೆಂದು ಅದು ಹೇಳಿದೆ.

 ಸಶಸ್ತ್ರ ಪಡೆಗಳ (ವಿಶೇಷಾಧಿಕಾರ),1958ರ ಸೆಕ್ಷನ್ 3ರಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿಕೊಂಡು 2020ರ ಜೂನ್ 30ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳುಗಳ ಅವಧಿಗೆ ನಾಗಲ್ಯಾಂಡ್ ರಾಜ್ಯವನ್ನು ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಗೃಹ ಸಚಿವಾಲಯಆದೇಶದಲ್ಲಿ ತಿಳಿಸಿದೆ.

ನಾಗಾಲ್ಯಾಂಡ್ ರಾಜ್ಯವನ್ನು ಹಲವು ದಶಕಗಳಿಂದ ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸುತ್ತಾ ಬರಲಾಗಿದೆ. 2015ರ ಆಗಸ್ಟ್ 3ರಂದು ನಾಗಾ ಬಂಡುಕೋರ ಗುಂಪು ನ್ಯಾಶನಲಿಸ್ಟ್ ಸೋಶಿಯಲಿಸ್ಟ್ ಕೌನ್ಸಿಲ್ ( ಇಸಾಕ್ ವಿವಿಯಾ) ಹಾಗೂ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಕೇಂದ್ರ ಸರಕಾರದ ಸಂಧಾನಕಾರ ಆರ್.ಎನ್.ರವಿ ಅವರ ನಡುವೆ ಶಾಂತಿ ಒಪ್ಪಂದಕ್ಕೆ ಸಹಿಹಾಕಲಾದ ಬಳಿಕವೂ ಆ ರಾಜ್ಯದ ಪ್ರಕ್ಷುಬ್ಧ ಪ್ರದೇಶ ಸ್ಥಾನಮಾನವನ್ನು ರದ್ದುಪಡಿಸಿರಲಿಲ್ಲ .

ಅಸ್ಸಾಂ, ಮಣಿಪುದ ಬಹುತೇಕ ಭಾಗಗಳಲ್ಲಿ ಹಾಗೂ ಅರುಣಾಚಲ ಪ್ರದೇಶದ ಮೂರು ಜಿಲ್ಲೆಗನ್ನು ಕೂಡಾ ಪ್ರಕ್ಷುಬ್ಧ ಪ್ರದೇಶಗಳೆಂದು ಘೋಷಿಸಲಾಗಿದೆ.

 ನಾಗಲ್ಯಾಂಡ್‌ನಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯು ಭದ್ರತಾ ಪಡೆಗಳಿ ೆ ಅಗತ್ಯಬಿದ್ದಲ್ಲಿ ನಾಗರಿಕರನ್ನು ಬಂಧಿಸುವ ಹಾಗೂ ಶೋಧಿಸುವ ವ್ಯಾಪಕವಾದ ಅಧಿಕಾರಗಳನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News