ಸಿಎಫ್‌ಐಯಿಂದ ವೈದ್ಯ ದಿನಾಚರಣೆ: ಕೊರೋನ ಸುರಕ್ಷಿತಾ ಕಿಟ್ ವಿತರಣೆ
Update: 2020-07-01 22:05 IST
ಉಡುಪಿ, ಜು.1: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಇಂದು ಕೊರೋನ ಸುರಕ್ಷಿತಾ ಕಿಟ್‌ಗಳನ್ನು ನೀಡುವ ಮೂಲಕ ವೈದ್ಯರ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಸಮಿತಿಯ ಸದಸ್ಯ ಅಸೀಲ್ ಆದಿಉಡುಪಿ ನೇತೃತ್ವದ ನಿಯೋಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ಅವರಿಗೆ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್‌ಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಮಸೂದ್, ತೌಹೀದ್, ಉಡುಪಿ ನಗರ ಉಪಾಧ್ಯಕ್ಷ ಸಫ್ರಾನ್ ಉಪಸ್ಥಿತರಿದ್ದರು.