ಕೋವಿಡ್ 19 ಭೀತಿ : ಉಳ್ಳಾಲ ಕೋಡಿ, ಕೋಟೆಪುರ ವರ್ತಕರು ಸ್ವಯಂ ಬಂದ್

Update: 2020-07-01 17:03 GMT

ಉಳ್ಳಾಲ : ಕೋವಿಡ್19 ಅಟ್ಟಹಾಸ ಉಳ್ಳಾಲದಾದ್ಯಂತ ಮುಂದುವರಿದ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ  ಉಳ್ಳಾಲ ಕೋಡಿ, ಕೋಟೆಪುರ ಜುಮಾ ಮಸೀದಿ ಆಡಳಿತ ಸಮಿತಿ ನೇತೃತ್ವದಲ್ಲಿ ವರ್ತಕರು ಸ್ವಯಂ ಬಂದ್ ನಡೆಸಿದ್ದಾರೆ.

ಅಳೇಕಲ, ಮಂಚಿಲ, ಮಾರ್ಗತ್ತಲೆ, ಹಳೆಕೋಟೆ ಪ್ರದೇಶಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿ  ಮನೆಗೆ ಜನಜಾಗೃತಿ ಅಭಿಯಾನ ಆಯೋಜಿಸಿ ಕೊರೊನ ಸೋಂಕು ಹರಡದಂತೆ ತಡೆಯಲು ಮಾಡಬೇಕಾದ ಕಾರ್ಯ ಗಳ ಬಗ್ಗೆ ಮಾಹಿತಿ ನೀಡಿದರು.

ಉಳ್ಳಾಲದಲ್ಲಿ  ತೀವ್ರಗೊಂಡ ಕೊರೊನಾ ಎಂಬ ಮಾರಕ ವೈರಸ್  ನಿರ್ಮೂಲನೆಯಾಗುವವರೆಗೆ  ಉಳ್ಳಾಲದ ಸರ್ವ ಧರ್ಮದ ವ್ಯಾಪಾರಸ್ಥರು ವಹಿವಾಟು ದಾರರು ಆಟೋ ಚಾಲಕರು  ಪ್ರತಿದಿನ ಮಧ್ಯಹ್ನ 12 30 ಗಂಟೆಯವರೆಗೆ ಮಾತ್ರ   ವ್ಯಾಪಾರ ವಹಿವಾಟು ಮಾಡಿ ಮಧ್ಯಾಹ್ನದ ಬಳಿಕ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಉಳ್ಳಾಲ ವನ್ನು  ಕೊರೊನಾ ಮುಕ್ತಗೊಳಿಸಲು ಮುಂದಾಗಿದ್ದಾರೆ.

ವ್ಯವಹಾರ 5ಗಂಟೆಗೆ ಸೀಮಿತ ಗೊಳಿಸಲು ದರ್ಗಾ ಅಧ್ಯಕ್ಷರ ಮನವಿ

ಉಳ್ಳಾಲ ಜಮಾಅತ್ ವ್ಯಾಪ್ತಿಯ ವರ್ತಕರು 5ಗಂಟೆಗೆ ವ್ಯವಹಾರ ಸ್ಥಗಿತಗೊಳಿಸಬೇಕು.ಮಾಸ್ಕ್ ರಹಿತ ಗ್ರಾಹಕರ ಜತೆ ವ್ಯವಹರಿಸದೇ ಇರುವುದು. ಅಗತ್ಯ ಕಾರ್ಯಗಳನ್ನು ಐದು ಗಂಟೆಯ ಒಳಗೆ ಮುಗಿಸಬೇಕು. 5 ಗಂಟೆಯ  ನಂತರ  ವಾಹನ ಚಾಲಕರು  ಓಡಾಟ ಸ್ಥಗಿತಗೊಳಿಸಿ ನಮ್ಮ ಆರೋಗ್ಯ ಕಾಪಾಡಲು ಸರ್ಕಾರ ದ ಆದೇಶಕ್ಕೆ ಕಾಯದೇ ನಾವೇಲಾಕ್ ಡೌನ್ ಮಾಡಿ ಇರಲು ಸಹಕರಿಸುವಂತೆ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರು ಎಲ್ಲಾ ಮಸೀದಿಗಳ ಆಡಳಿತ ಸಮಿತಿ ಗಳಿಗೆ, ವಿವಿಧ ಸಮಾಜಕ್ಕೆ ಸೇರಿದ ದೇವಸ್ಥಾನ ಗಳಿಗೆ, ಉಳ್ಳಾಲ ನರಸಭೆ ಪೌರಾಯುಕ್ತ ಹಾಗೂ ಕೌನ್ಸಿಲರ್ ಗಳಿಗೆ ಅಂಗಡಿ ಮಾಲೀಕರಿಗೆ  ನೊಟೀಸ್ ನೀಡುವ ಮೂಲಕ ಮನವಿ ಮಾಡಿದ್ದಾರೆ. ಇದಕ್ಕೆ ಬಹಳಷ್ಟು ಜನರ ಸ್ಪಂದನೆ ದೊರೆತಿದ್ದು ,ಕೊರೊನ ಜಾಗೃತಿ ಯ ದೃಷ್ಟಿಯಿಂದ  5ಗಂಟೆಯವರೆಗೆ ಮಾತ್ರ ವ್ಯವಹರಿಸಲು ಅಂಗಡಿ ಮಾಲಕರು ಒಪ್ಪಿಕೊಂಡಿದ್ದಾರೆ ಎಂದು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.

ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಜನರಿಗೆ ಫಾರೂಕ್ ಉಳ್ಳಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News