ಟ್ರಂಪ್ ಅಣ್ಣನ ಮಗಳ ಪುಸ್ತಕ ಬಿಡುಗಡೆಗೆ ತಾತ್ಕಾಲಿಕ ತಡೆ

Update: 2020-07-01 17:32 GMT

ನ್ಯೂಯಾರ್ಕ್, ಜು. 1: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ‘ಜಗತ್ತಿನ ಅತ್ಯಂತ ಅಪಾಯಕಾರಿ ಮನುಷ್ಯ’ ಎಂಬುದಾಗಿ ಬಣ್ಣಿಸುವ ಅವರ ಅಣ್ಣನ ಮಗಳು ಬರೆದ ಪುಸ್ತಕದ ಬಿಡುಗಡೆಗೆ ನ್ಯೂಯಾರ್ಕ್‌ನ ನ್ಯಾಯಾಧೀಶರೊಬ್ಬರು ಮಂಗಳವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.

ಮೇರಿ ಟ್ರಂಪ್ ಬರೆದಿರುವ 240 ಪುಟಗಳ ಪುಸ್ತಕದ ಬಿಡುಗಡೆಗೆ ಜುಲೈ 10ರವರೆಗೆ ತಡೆಯಾಜ್ಞೆ ನೀಡಲಾಗಿದೆ. ಜುಲೈ 10ರಂದು ಲೇಖಕಿ ಮತ್ತು ಅವರ ಪ್ರಕಾಶಕ ಸಂಸ್ಥೆ ಸೈಮನ್ ಆ್ಯಂಡ್ ಶುಸ್ಟರ್ ತಮ್ಮ ಪರವಾಗಿ ವಾದಿಸಲಿದ್ದಾರೆ. ಬಳಿಕ ಪುಸ್ತಕದ ಭವಿಷ್ಯವು ನಿರ್ಧಾರವಾಗಲಿದೆ.

ಇದಕ್ಕೂ ಮೊದಲು ಡೊನಾಲ್ಡ್ ಟ್ರಂಪ್‌ರ ಸಹೋದರ ರಾಬರ್ಟ್ ಟ್ರಂಪ್, ಪುಸ್ತಕಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಕ್ವೀನ್ಸ್‌ನ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News