ಕೋವಿಡ್-19ಗೆ ಬಂಟ್ವಾಳದಲ್ಲಿ ಮತ್ತೊಂದು ಬಲಿ

Update: 2020-07-02 05:21 GMT
ಫೈಲ್ ಫೋಟೊ

ಬಂಟ್ವಾಳ, ಜು. 2: ಕೋವಿಡ್ - 19 (ಕೊರೋನ) ಸೋಂಕಿಗೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ 45 ವರ್ಷದ ವ್ಯಕ್ತಿಯೋರ್ವರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಿಡ್ನಿ ಸಮಸ್ಯೆಯ ಹಿನ್ನೆಲೆಯಲ್ಲಿ ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಗಂಟಲ ದ್ರವದ ಮಾದರಿಯ ಪರೀಕ್ಷೆಯಲ್ಲಿ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಸೊಂಕಿನ ಮೂಲ ಯಾವುದು ಎಂಬುದು ಇನ್ನೂ ದೃಢವಾಗಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News