ಗುಣಮಟ್ಟದ ಗ್ರಾಹಕ ಸೇವೆಗೆ ಗಮನ : ಸ್ನೇಹಲ್

Update: 2020-07-02 10:25 GMT

ಮಂಗಳೂರು, ಜು.2:ಡಿಜಿಟಲ್ ಮೀಟರ್ ಬಳಕೆ ಸೇರಿದಂತೆ ಗುಣಮಟ್ಟದ ಗ್ರಾಹಕ  ಸೇವೆಗೆ  ಹೆಚ್ಚಿನ ಗಮನಹರಿಸಲಾಗುವುದು ಎಂದು ಮೆಸ್ಕಾಂ ಆಡಳಿತ ನಿರ್ದೇಶಕಿ ಸ್ನೇಹಲ್ ತಿಳಿಸಿದ್ದಾರೆ.

ಅವರು ನಗರದ ಪತ್ರಿಕಾಭವನದಲ್ಲಿ ಗುರುವಾರ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆ ಯಲ್ಲಿ ಶೇ 8ರಷ್ಟು ವಿದ್ಯುತ್  ಮೆಸ್ಕಾಂ ಕೊಡುಗೆಯಾ ಪ್ರತಿದಿನ 15 ಮಿಲಿಯನ್ ಯೂನಿಟ್ ವಿದ್ಯುತ್  ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡಲು ಮೆಸ್ಕಾಂ ಬಯಸುತ್ತದೆ ಎಂದರು.

ಕೊರೋನಾ ಹಿನ್ನೆಲೆಯ ಲಾಕ್ ಡೌನ್ ಕಾರಣದಿಂದ ವಾಣಿಜ್ಯ ಬಳಕೆಯ ವಿದ್ಯುತ್ ಉಪಯೋಗ ದಲ್ಲಿ ಶೇ 60 ಕಡಿತವಾಗಿದೆ ಆದರೆ ಇತರ ಕ್ಷೇತ್ರದಲ್ಲಿ ವಿದ್ಯುತ್ ಬಳಕೆ ಯಲ್ಲಿ ಶೇ 30ರಷ್ಡು  ಹೆಚ್ಚಿದೆ.ಈ  ಬಾರಿ ವಿವಿಧ ಕಾರಣಗಳಿಂದ ಮೆಸ್ಕಾಂ ವ್ಯಾಪ್ತಿಯ ದ.ಕ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಮೆಸ್ಕಾಂ ವ್ಯಾಪ್ತಿ ಯಲ್ಲಿ ಈ ಬಾರಿಯ ಮಳೆಗಾಲದ ಆರಂಭದಿಂದ ಇದುವರೆಗೆ ಸುಮಾರು 12.2 ಕೋಟಿ  ರೂ. ಹಾನಿ ಸಂಭವಿಸಿದೆ ಎಂದು ಸ್ನೇಹಲ್  ತಿಳಿಸಿದ್ದಾರೆ.

ಕೊರೋನ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೂ ಮೆಸ್ಕಾಂನ ಸಿಬ್ಬಂದಿಗಳು ಗಮನಾರ್ಹವಾದ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಕಳೆದ ವರ್ಷ ಸುಮಾರು 65ವಿದ್ಯುತ್ ಅಪಘಡಗಳು ನಡೆದು ಇಬ್ಬರು ಮ್ರತಪಟ್ಡಿದ್ದಾರೆ.ಇಂತಹ ಅವಘಡ ಗಳನ್ನು ತಪ್ಪಿಸುವ ದೃಷ್ಟಿಯಿಂದ ಸಾಕಷ್ಟು ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲಾ ಗುತ್ತಿದೆ.ಮಳೆಗಾಲದಲ್ಲಿ ವಿದ್ಯುತ್ ತಂತಿ ಕೆಳಗಿನ ಮರಗಳ ಕೊಂಬೆ ಸವರುವ ಕೆಲಸ, ಟ್ರಾನ್ಸ್ ಫಾರ್ಮರ್ ಗಳ  ದುರಸ್ತಿ ಕೆಲಸಗಳನ್ನು ಶೇ 85ರಿಂದ 95ರಷ್ಟು  ಪೂರ್ಣ ಗೊಳಿಸಲಾಗಿದೆ,ಗ್ರಾಹಕರ ಸಾಕಷ್ಟು ಕರೆಗಳಿಗೆ ಸೂಕ್ತ ವಾಗಿ ಸ್ಪಂದಿಸಲಾಗುತ್ತಿದೆ ಎಂದು ಸ್ನೇಹಲ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ, ಮುಖ್ಯ ಇಂಜಿನಿಯರ್ ಮಂಜಪ್ಪ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News