ಮುಹಮ್ಮದ್ ಇಕ್ಬಾಲ್ ದರ್ಬಾರ್ ನಿಧನ

Update: 2020-07-02 14:13 GMT

ರಿಯಾದ್, ಜು. 2: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಕೊಂಪಾಸ್ ಓಶಿಯನ್ ಲಾಜಿಸ್ಟಿಕ್ಸ್ ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮುಹಮ್ಮದ್ ಇಕ್ಬಾಲ್ ದರ್ಬಾರ್ (65) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗಿನ ಜಾವ 2:53ಕ್ಕೆ ರಿಯಾದ್‌ನ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಮಂಗಳೂರಿನ ಅತ್ತಾವರದ ನಿವಾಸಿಯಾಗಿದ್ದ ಮುಹಮ್ಮದ್ ಇಕ್ಬಾಲ್ ದರ್ಬಾರ್ ಹಲವು ವರ್ಷಗಳಿಂದ ರಿಯಾದ್‌ನಲ್ಲಿ ಕರ್ತವ್ಯದಲ್ಲಿ ದ್ದರು. ಮೃತರು ಪತ್ನಿ ಮತ್ತು ಮೂವರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News