​ಬ್ಯಾರಿ ಅಕಾಡಮಿಯ 2019-2020ನೇ ಸಾಲಿನ ಗೌರವ ಪ್ರಶಸ್ತಿ, ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Update: 2020-07-02 12:45 GMT

ಮಂಗಳೂರು, ಜು.2: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

1.ಬ್ಯಾರಿ ಭಾಷೆ ಕ್ಷೇತ್ರ, 2. ಬ್ಯಾರಿ ಕಲೆ ಕ್ಷೇತ್ರ, 3. ಬ್ಯಾರಿ ಸಾಹಿತ್ಯ - ಸಂಘಟನೆ - ಸಮಾಜ ಸೇವೆ ಕ್ಷೇತ್ರ. ಈ ಮೂರು ಕ್ಷೇತ್ರಗಳಲ್ಲಿ ಗಣನೀಯ ವಾಗಿ ಸೇವೆ ಸಲ್ಲಿಸಿದ 6 ಮಂದಿ ಮಹನೀಯರನ್ನು 2019 ಮತ್ತು 2020ರ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವುದು. ಗೌರವ ಪ್ರಶಸ್ತಿಯ ನಗದು 50,000 ರೂ., ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪಾಹಾರಗಳನ್ನು ಒಳಗೊಂಡಿದೆ. ಪ್ರತಿಯೊಂದು ಕ್ಷೇತ್ರಕ್ಕೆ ತಲಾ ಒಬ್ಬರಂತೆ 2019ರ ಸಾಲಿಗೆ 3 ಮಂದಿ ಮತ್ತು 2020ರ ಸಾಲಿಗೆ 3 ಮಂದಿ ಹೀಗೆ ಒಟ್ಟು 6 ಮಂದಿ ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

ಅರ್ಜಿಗಳನ್ನು ಸ್ವತ: ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸು ಮಾಡಿ ಅರ್ಜಿ ಸಲ್ಲಿಸಬಹುದು. ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ ಆದರೆ ಪ್ರಶಸ್ತಿಗೆ ಆಯ್ಕೆ ಆಗದಿರುವ ಸಾಧಕರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗುವುದು. ಆದರೆ ಸಾಧನೆಯ ಪೂರಕ ವಿವರಗಳಿದ್ದಲ್ಲಿ ಅಕಾಡಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿಗಳನ್ನು ಕಳುಸಬೇಕು. ಅರ್ಜಿಯನ್ನು ಭಾವಚಿತ್ರ ಹಾಗೂ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಕಳುಹಿಸಿ ಕೊಡಬಹುದು.

ಗೌರವ ಪುರಸ್ಕಾರ 2019 ಮತ್ತು 2020 : 2019 ಮತ್ತು 2020ನೇ ಸಾಲಿನಲ್ಲಿ ಬ್ಯಾರಿ ಭಾಷೆ, ಕಲೆ, ಸಾಹಿತ್ಯ, ಸಂಘಟನೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ 10 ಮಂದಿ ಸಾಧಕರಿಗೆ ಗೌರವ ಪುರಸ್ಕಾರವನ್ನು ನೀಡಲಾಗುವುದು. ಗೌರವ ಪುರಸ್ಕಾರವು ನಗದು ಹೊರತುಪಡಿಸಿ ಪ್ರಮಾಣ ಪತ್ರ, ಸ್ಮರಣಿಕೆ, ಫಲಪುಷ್ಪಾಹಾರಗಳನ್ನೊಳಗೊಂಡಿರುತ್ತದೆ.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಬ್ಯಾರಿ ಅಕಾಡಮಿ ಗೌರವ ಪ್ರಶಸ್ತಿ ಹಾಗೂ ಬ್ಯಾರಿ ಅಕಾಡಮಿ ಗೌರವ ಪುರಸ್ಕಾರ ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೆ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು-575001 ಈ ವಿಳಾಸಕ್ಕೆ ಜು.15ರೊಳಗೆ ಸಲ್ಲಿಸುವಂತೆ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News