ರೈಲು ಹಳಿಯಲ್ಲಿ ತಾಯಿ, ಸಹೋದರಿಯರ ಮೃತದೇಹಗಳ ಸಮೀಪ ಅಳುತ್ತಾ ಕುಳಿತಿದ್ದ ಮಗು ಪತ್ತೆ

Update: 2020-07-02 13:08 GMT

ಹೊಸದಿಲ್ಲಿ: ವಾಯುವ್ಯ ದಿಲ್ಲಿಯ ಮಂಡವಲಿ ಪ್ರದೇಶದ ರೈಲು ಹಳಿಯಲ್ಲಿ ಗುರುವಾರ ಬೆಳಗ್ಗೆ ಮಹಿಳೆಯೊಬ್ಬರು ಮತ್ತಾಕೆಯ ಇಬ್ಬರು ಪುತ್ರಿಯರ ಮೃತದೇಹಗಳು ಪತ್ತೆಯಾಗಿವೆ. ಮಹಿಳೆಯ ಒಂದು ವರ್ಷದ ಗಂಡು ಮಗು ತಾಯಿ ಮತ್ತು ಸಹೋದರಿಯರ ಕಳೇಬರಗಳ ಸಮೀಪ ಅಳುತ್ತಾ ಕುಳಿತಿದ್ದದ್ದು ಪತ್ತೆಯಾಗಿತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಮೃತದೇಹಗಳ ಪಕ್ಕ ಒಂದು ಮೊಬೈಲ್ ಫೋನ್ ಕೂಡ ಇದ್ದುದರಿಂದ  ಮೃತ ಮಹಿಳೆಯನ್ನು ಮಂಡವಲಿ ನಿವಾಸಿ 30 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ.

ಆಕೆಯ ಇಬ್ಬರು ಪುತ್ರಿಯರ ವಯಸ್ಸು ಐದು ಹಾಗೂ ಆರು ವರ್ಷ ಆಗಿತ್ತು. ಕೌಟುಂಬಿಕ ಕಲಹದಿಂದ ಬೇಸತ್ತು ಆಕೆ ಆತ್ಮಹತ್ಯೆಗೈದಿದ್ದಾಳೆಂದು ಶಂಕಿಸಲಾಗಿದೆ.

ಆಕೆಯ ಪತಿ ಇ-ರಿಕ್ಷಾ ಚಾಲಕನಾಗಿದ್ದು ಬುಧವಾರ ಸಂಜೆ ಮನೆಗೆ ಮರಳಿದಾಗ ಪತ್ನಿ, ಮಕ್ಕಳು ನಾಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News