ಆನ್‌ಲೈನ್ ತರಗತಿ ಉನ್ನತ ಶಿಕ್ಷಣದ ಆದ್ಯತೆಯಲ್ಲ : ಅಮುಕ್ತ್ ಸದಸ್ಯರ ಪ್ರತಿಪಾದನೆ

Update: 2020-07-02 14:41 GMT

ಮಂಗಳೂರು, ಜು.2: ಉನ್ನತ ಶಿಕ್ಷಣದಲ್ಲಿ ಆನ್‌ಲೈನ್ ತರಗತಿಗಳಿಂದ ವಿದ್ಯಾರ್ಥಿಗಳು ಪಡೆದುಕೊಳ್ಳುವ ಬದಲು ಕಳೆದುಕೊಳ್ಳುವ ಅನುಭವ ವಾಗುತ್ತಿದೆ. ಆನ್‌ಲೈನ್ ತರಗತಿ ಉನ್ನತ ಶಿಕ್ಷಣದ ಆದ್ಯತೆ ಆಗಿರಬಾರದು ಎನ್ನುವುದನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘದ (ಅಮುಕ್ತ್) ಸದಸ್ಯರೆಲ್ಲ ಬಲವಾಗಿ ಪ್ರತಿಪಾದಿಸಿದರು.

ನಗರದಲ್ಲಿ ಅಮುಕ್ತ್‌ನ ನಾಲ್ಕನೇ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ, ಪ್ರಸ್ತುತ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಉನ್ನತ ಶಿಕ್ಷಣದ ಮೇಲೆ ಆಗುತ್ತಿರುವ ಮೂರು ಗಂಭೀರ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು.

ಆನ್‌ಲೈನ್ ತರಗತಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿಯಾದ ಮಾನವೀಯ ಸಂಬಂಧಗಳೇ ಇಲ್ಲದಂತಾಗಿದೆ. ಕಾಲೇಜುಗಳೆಂದರೆ ತರಗತಿ ಹಾಗೂ ಪಠ್ಯಗಳಷ್ಟೇ ಅಲ್ಲ; ಅದೊಂದು ಮಾನವೀಯ ಸಂಬಂಧಗಳ ಪ್ರಕ್ರಿಯೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ಸರಕಾರದ ಆದೇಶದಂತೆ ಆನ್‌ಲೈನ್ ತರಗತಿಗಳನ್ನು ನಡೆಸಿದ ಪ್ರಾಧ್ಯಾಪಕರು, ಅದರಲ್ಲಿ ವಿಫಲವಾದ ಹಲವು ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಬೋಧಕರಿಗೆ ವೃತ್ತಿ ಭದ್ರತೆ ಇಲ್ಲದಿರುವುದೇ ಉನ್ನತ ಶಿಕ್ಷಣದ ಮೌಲ್ಯ ಕುಸಿಯುತ್ತಿರುವುಲ್ಲಿನ ಪ್ರಮುಖ ಕಾರಣವಾಗಿದೆ. ಸರಕಾರಿ ಹಾಗೂ ಖಾಸಗಿ ಕಾಲೇಜುಗಳ ಬಹಳಷ್ಟು ಬೋಧಕರು ಕೋವಿಡ್-19ನ ಸಂಕಟದ ಸಂದರ್ಭದಲ್ಲಿ ಸಂಬಳವಿಲ್ಲದೆ, ಕೆಲಸವಿಲ್ಲದೆ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇಂತಹ ಶಿಕ್ಷಕರಿಗೆ ಸರಕಾರ ಭದ್ರತೆ ಒದಗಿಸಬೇಕಾದ್ದು ಅದರ ಕರ್ತವ್ಯವಾಗಿದೆ. ಸರಕಾರ ಅವರ ಸಮಸ್ಯೆಗಳ ಬಗ್ಗೆ ತುರ್ತಾಗಿ ಗಮನಹರಿಸಬೇಕು ಎನ್ನುವ ಆಗ್ರಹ ಸಭೆಯಲ್ಲಿ ಪುನಃ ಪ್ರತಿಧ್ವನಿಸಿತು.

'Common syllabus' ಇತ್ತೀಚೆಗೆ ವಿಶ್ವವಿದ್ಯಾನಿಲಯಗಳ ಮತ್ತು 'Common time-table' 'Common Curriculum' ಬಹು ಚರ್ಚಿತ ವಿಷಯವಾಗಿದೆ. ಇದು ಕೂಡ ಉನ್ನತ ಶಿಕ್ಷಣದ ಆಶಯ ಹಾಗೂ ತಾತ್ವಿಕತೆಗೆ ವಿರೋಧವಾದದ್ದು. ಇದರ ಬದಲಾಗಿ ಪದ್ಧತಿಗೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು ಎಂದು ಅಮುಕ್ತ್ ಅಧ್ಯಕ್ಷ ಡಾ.ಎನ್.ಎಂ. ಜೋಸೆಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News