ಭಟ್ಕಳ ವುಮೆನ್ಸ್ ಸೆಂಟರ್ ಕಟ್ಟಡದಲ್ಲಿ ಕೊರೋನ ಸೋಂಕಿತರ ಆರೈಕೆ

Update: 2020-07-02 14:53 GMT

ಭಟ್ಕಳ:  ಭಟ್ಕಳದಲ್ಲಿ ದಿನೆ ದಿನೆ  ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಮತ್ತು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಭೀತಿಯ ಹಿನ್ನೆಲೆಯಲ್ಲಿ,  ಹೆಬಳೆ ಪಂಚಾಯತ್ ವ್ಯಾಪ್ತಿಯ ಭಟ್ಕಳ ವುಮೆನ್ಸ್ ಸೆಂಟರ್ ನ್ನು ಕೊರೋನ ಕೇಂದ್ರವಾಗಿ ಪರಿವರ್ತಿಸುವ ಕಾರ್ಯವು ಸಾಗಿದ್ದು 100 ಹಾಸಿಗೆಯುಳ್ಳ ಕಟ್ಟಡ ಸೋಂಕಿತರಿಗಾಗಿ ತೆರೆದುಕೊಳ್ಳಲಿದೆ ಎಂದು ಮಜ್ಲಿಸ್-ಇ-ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ತಿಳಿಸಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಾಮಿಯಾಬಾದ್ ರಸ್ತೆಯ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಭವ್ಯವಾದ ಮತ್ತು ಸುಂದರವಾದ ಕಟ್ಟಡದಲ್ಲಿ 100 ಹಾಸಿಗೆಗಳನ್ನು ಹಾಕುವ ಕಾರ್ಯ ಭರದಿಂದ ಸಾಗಿದೆ. ಕರೋನ ಸೋಂಕಿನಿಂದ ಬಳಲುತ್ತಿರುವ ಜನರನ್ನು ಈ ಹಿಂದೆ ಕಾರವಾರ ಆಸ್ಪತ್ರೆಗೆ ಕಳುಹಿಸಲಾಗಿತ್ತು, ಆದರೆ ಪೀಡಿತ ಜನರ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ, ಅಲ್ಲಿ ಕಳಪೆ ನಿರ್ವಹಣೆಯ ದೂರುಗಳು ಕೇಳಿ ಬರುತ್ತಿವೆ.  ಕರೋನದಿಂದ ಬಳಲುತ್ತಿರುವ ಜನರಿಗೆ ಸ್ಥಳಾವಕಾಶ ಕಲ್ಪಿಸಲು ಮಹಿಳಾ ಕೇಂದ್ರವನ್ನು ಈಗ ಸ್ವಾಧೀನಪಡಿಸಿಕೊಂಡಿದೆ, ಇಲ್ಲಿ ಹಾಸಿಗೆಗಳನ್ನು ಹಾಕಲಾಗುತ್ತಿದೆ, ಆದರೆ ಸಮಸ್ಯೆ ಎಂದರೆ ಹಾಸಿಗೆಗಳು ಲಭ್ಯವಿಲ್ಲ, ನಾವು ಹೊಸ ಹಾಸಿಗೆ ಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದೇವೆ, ಮಂಗಳೂರು, ಹುಬ್ಬಳ್ಳಿ, ಮುಂಬೈ ಮತ್ತು ಗುಜರಾತ್‌ನಲ್ಲಿ ಸಂಪರ್ಕ ಮಾಡಲಾಗುತ್ತಿದೆ ಆದರೆ ಹಾಸಿಗೆಗಳು ಲಭ್ಯವಿಲ್ಲ ಎಂದರು.

ಕಾರವಾರ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲ ಎನ್ನುವ ಕುರಿತು ಹಲವಾರು ದೂರುಗಳು ಬರುತ್ತಿವೆ. ಅಲ್ಲಿ ಯಾವುದೇ ವ್ಯವಸ್ಥೆಯು ಸರಿಯಾಗಿಲ್ಲ ಎನ್ನುವ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿದೆ ಎಂದು ಇಂಡಿಯನ್ ನವಯತ್ ಫೋರಂ ಉಪಾಧ್ಯಕ್ಷ ಎಸ್.ಎಂ.ಅರ್ಷದ್ ಹೇಳಿದ್ದಾರೆ. ಆದ್ದರಿಂದ, ಇಲ್ಲಿನ ವುಮನ್ಸ್ ಸೆಂಟರನ್ನು ಕರೋನ ಕೇಂದ್ರವನ್ನಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ.  ಈ ಸಂಸ್ಥೆಯ ಮಾಲಕರಾದ ಖಾದಿಜಾ ಖಾಜಿ ಮತ್ತು ಅಮೆರಿಕದ ಪ್ರಸಿದ್ಧ ಉದ್ಯಮಿ ಜುಬೈರ್ ಖಾಝಿಯವರು ಅತ್ಯಂತ ಸಂತೋಷದಿಂದ  ಒಪ್ಪಿಕೊಂಡು ತಾತ್ಕಾಲಿಕವಾಗಿ ಕೊರೋನಾ ಕೇಂದ್ರವನ್ನಾಗಿ ಪರಿವರ್ತಿಸಲು ಒಪ್ಪಿಗೆ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News