ಹಿರಿಯ ಗುತ್ತಿಗೆದಾರ ಎಂ.ಮೊಯ್ದಿನ್ ನಿಧನ

Update: 2020-07-02 15:30 GMT

ಮಂಗಳೂರು, ಜು. 2: ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಗುತ್ತಿಗೆದಾರರಾಗಿದ್ದ ಎಂ. ಮೊಯ್ದೀನ್ (58) ನಗರದ ಫಲ್ನೀರ್‌ನ ಫ್ಲಾಟ್‌ವೊಂದರ ಸ್ವಗೃಹದಲ್ಲಿ ಗುರುವಾರ ನಿಧನರಾದರು.

ಮೂಲತಃ ಕೆ.ಸಿ.ರೋಡ್‌ನವರಾದ ಮೃತರು ಮಂಗಳೂರಿನಲ್ಲೇ ವಾಸವಾಗಿದ್ದರು. ಇವರು ಪತ್ನಿ, ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News