2036ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಪುಟಿನ್ ಹಾದಿ ಸುಗಮ

Update: 2020-07-02 17:29 GMT

ಮಾಸ್ಕೋ (ರಶ್ಯ), ಜು. 2: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2036ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವ ಸಂವಿಧಾನ ತಿದ್ದುಪಡಿಯ ಪರವಾಗಿ ದೇಶವ್ಯಾಪಿ ನಡೆದ ಮತದಾನದಲ್ಲಿ ರಶ್ಯನ್ನರು ಭಾರೀ ಸಂಖ್ಯೆಯಲ್ಲಿ ಮತಹಾಕಿದ್ದಾರೆ ಎನ್ನುವುದನ್ನು ಆಂಶಿಕ ಫಲಿತಾಂಶಗಳು ಬುಧವಾರ ತೋರಿಸಿವೆ.

ಏಳು ದಿನಗಳ ಮತದಾನದ ಕೊನೆಯಲ್ಲಿ ಮತ ಎಣಿಕೆ ನಡೆದಿದ್ದು, 60 ಶೇಕಡ ಮತಗಳ ಎಣಿಕೆ ಪೂರ್ಣಗೊಂಡಿದೆ. 76.9 ಶೇಕಡ ಮತದಾರರು ಸುಧಾರಣೆಗಳಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಕೇಂದ್ರೀಯ ಚುನಾವಣಾ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News