ಭಾರತ ನಿರ್ಮಿತ ಮೊದಲ ಕೊರೋನ ವೈರಸ್ ಲಸಿಕೆ ಆಗಸ್ಟ್ 15 ರೊಳಗೆ ಬಿಡುಗಡೆ ಸಾಧ್ಯತೆ

Update: 2020-07-03 08:23 GMT

ಹೊಸದಿಲ್ಲಿ,ಜು.3: ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಡೆಟ್ ಸಹಭಾಗಿತ್ವದಲ್ಲಿ ಕೋವಾಕ್ಸಿನ್ ಅಭಿವೃದ್ಧಿಪಡಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ತ್ವರಿತಗತಿಯಲ್ಲಿ ಪ್ರಯತ್ನಿಸುವುದರೊಂದಿಗೆ ಆಗಸ್ಟ್ 15ರೊಳಗೆ ಮೊತ್ತ ಮೊದಲ ಮೇಡ್ ಇನ್ ಇಂಡಿಯಾ ಕೊರೋನ ವೈರಸ್ ಲಸಿಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸ್ಥಳೀಯ ಕೋವಿಡ್-19 ಲಸಿಕೆ(ಬಿಬಿವಿ152 ಕೋವಿಡ್ ಲಸಿಕೆ)ಪ್ರಾಯೋಗಿಕ ಪರೀಕ್ಷೆಗಳಿಗೆ ಒಂದು ಡಜನ್ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸರಕಾರದ ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.

 ಐಸಿಎಂಆರ್,ಕ್ಲಿನಿಕಲ್ ಪ್ರಯೋಗಗಳನ್ನು ಹೆಚ್ಚಿಸಲು ಸಂಸ್ಥೆಗಳನ್ನು ಕೇಳಿಕೊಂಡಿದೆ. ಏಕೆಂದರೆ ಇದು ಸರಕಾರದ ಉನ್ನತಮಟ್ಟದ ಮೇಲ್ವಿಚಾರಣೆ ಮಾಡುವ 'ಆದ್ಯತೆಯ ಯೋಜನೆ'ಯಾಗಿದೆ.

ಆಗಸ್ಟ್ 15 ರೊಳಗೆ ಸಾರ್ವಜನಿಕ ಆರೋಗ್ಯ ಬಳಕೆಗಾಗಿ ಲಸಿಕೆ ಬಿಡುಗಡೆ ಮಾಡುವ ಯೋಜನೆಗಳ ಬಗ್ಗೆ ಐಸಿಎಂಆರ್ ಚಿಂತನೆ ನಡೆಸುತ್ತಿದೆ.

 ಅಂತಿಮ ಫಲಿತಾಂಶವು ಈ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ಕ್ಲಿನಿಕಲ್ ಟ್ರಯಲ್ ಸೈಟ್‌ಗಳ ಸಹಕಾರವನ್ನು ಅವಲಂಬಿಸಿರುತ್ತದೆ. ಕ್ಲಿನಿಕಲ್ ಪ್ರಯೋಗಗಳಿಗೆ ಸಂಬಂಧಿಸಿದ ಅನುಮೋದನೆಗಳನ್ನು ಕ್ಷಿಪ್ರವಾಗಿಸಲು ಹಾಗೂ ಈ ವಾರದಿಂದ ವಿಷಯವನ್ನು ದಾಖಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಐಸಿಎಂಆರ್ ಎಲ್ಲ ಸಂಸ್ಥೆಗಳಿಗೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News