ಪುತ್ತೂರು: ಮನೆಯಂಗಳದಲ್ಲಿ ಪತ್ತೆಯಾದ 13 ಹೆಬ್ಬಾವು ಮರಿಗಳು

Update: 2020-07-03 11:24 GMT

ಪುತ್ತೂರು: ಮನೆಯಂಗಳದಲ್ಲಿ ಕಂಡು ಬಂದ 13 ಹೆಬ್ಬಾವು ಮರಿಗಳನ್ನು ಪುತ್ತೂರು ಸಾಮೆತ್ತಡ್ಕ ನಿವಾಸಿ ಸರೀಸೃಪ ಪ್ರೇಮಿ ಸ್ನೇಕ್ ಫಾಯಿಝ್ ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಪರ್ಪುಂಜ ಎಂಬಲ್ಲಿನ ಅಬ್ಬಾಸ್ ಎಂಬವರ ಮನೆಯ ಅಂಗಳದಲ್ಲಿ ತೆಂಗಿನ ಮರದ ಬುಡದಲ್ಲಿ ಈ ಹೆಬ್ಬಾವು ಮರಿಗಳು ಪತ್ತೆಯಾಗಿತ್ತು. ಅಬ್ಬಾಸ್ ಅವರು ಫಾಯಿಝ್‍ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅದರಂತೆ ಅಲ್ಲಿಗೆ ತೆರಳಿದ ಫಾಯಿಝ್ ಆಗತಾನೇ ಮೊಟ್ಟೆಯಿಂದ ಹೊರಬಂದಿರುವ ಈ ಮರಿಗಳನ್ನು ಫಾಯಿಝ್ ಅವರು ರಕ್ಷಣೆ ಮಾಡಿ ಕಾಡಿನಲ್ಲಿ ಬಿಟ್ಟಿದ್ದಾರೆ.

ಈ ಹಿಂದೆಯೂ ಅನೇಕ ಕಡೆಗಳಲ್ಲಿ ನಾಗರಹಾವು ಸೇರಿದಂತೆ ವಿವಿಧ ಜಾತಿಯ ವಿಷಪೂರಿತ ಹಾಗೂ ವಿಷವಲ್ಲದ ಹಾವುಗಳನ್ನು ಫಾಯಿಝ್ ಅವರು ರಕ್ಷಣೆ ಮಾಡಿ ಅರಣ್ಯ ಪ್ರದೇಶಗಳಿಗೆ ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News