ಉಡುಪಿ: ಕನ್ನಡ ಪ್ರವೇಶ,ಕಾವ,ಜಾಣ,ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

Update: 2020-07-03 12:27 GMT

ಉಡುಪಿ, ಜು.3: ಕನ್ನಡ ಸಾಹಿತ್ಯ ಪರಿಷತ್ತು 2020-21ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
2020ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆ.31 ಕೊನೆಯ ದಿನವಾಗಿದೆ. ಸೆ.15ರವರೆಗೆ ದಂಡ ಶುಲ್ಕ ರೂ.50 ಅನ್ನು ಹೆಚ್ಚುವರಿಯಾಗಿ ನೀಡಿ ಅಜಿರ್ ಸಲ್ಲಿಸಬಹುದು.

2020ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆ.31 ಕೊನೆಯ ದಿನವಾಗಿದೆ. ಸೆ.15ರವರೆಗೆ ದಂಡ ಶುಲ್ಕ ರೂ.50 ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು. 25 ರೂ. ಶುಲ್ಕ ಪಾವತಿಸಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಜುಲೈ ಒಂದರಿಂದ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ ಮೂವತ್ತು ರೂ. ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ಅಂಚೆ ಮೂಲಕ ಕುಹಿಸಲಾಗುತ್ತದೆ.

25 ರೂ. ಶುಲ್ಕ ಪಾವತಿಸಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಜುಲೈ ಒಂದರಿಂದ ಪಡೆಯಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ ಮೂವತ್ತು ರೂ. ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ. ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ -www.kasapa.in  - ಮೂಲಕ ಸಹ ಪಡೆದುಕೊಳ್ಳಬಹುದು. ಇವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ರೂ.25 ನ್ನು ಪ್ರತ್ಯೇಕವಾಗಿ ಪಾವತಿಸಬೇಕು.ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ, ಬೆಂಗಳೂರು-18 (ದೂರವಾಣಿ:080-26623584) ಇವರನ್ನು ಸಂಪರ್ಕಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News