ಪಿಡಿಓ ಸಹಿತ ಇಬ್ಬರು ಸಿಬ್ಬಂದಿಗೆ ಕೊರೋನ: ಕಾರ್ಕಳ, ಬೈಂದೂರು ತಾಲೂಕಿನ 2 ಗ್ರಾ.ಪಂ. ಗಳು ಸೀಲ್‌ಡೌನ್‌

Update: 2020-07-03 14:27 GMT

ಉಡುಪಿ, ಜು.3: ಕಾರ್ಕಳ ತಾಲೂಕಿನ ಪಂಚಾಯತ್ ಪಿಡಿಓ ಹಾಗೂ ಬೈಂದೂರು ತಾಲೂಕಿನ ಪಂಚಾಯತ್ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆ ಈ ತಾಲೂಕುಗಳ ಎರಡು ಪಂಚಾಯತ್ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಕಾರ್ಕಳ ತಾಲೂಕಿನ ಗ್ರಾಪಂ ಒಂದರ ಪಿಡಿಓಗೆ ಕೊರೋನ ಪಾಸಿಟಿವ್ ಕಂಡುಬಂದಿರುವುದರಿಂದ ಪಂಚಾಯತ್ ಕಚೇರಿ ಹಾಗೂ ಉಡುಪಿಯ ವಸತಿ ಸಮುಚ್ಛಯದಲ್ಲಿರುವ ಅವರ ವಾಸದ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇವರು ಕೆಲವು ದಿನಗಳ ಕಾಲ ಕ್ವಾರಂಟೇನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದರೆನ್ನಲಾಗಿದೆ.

ಬೈಂದೂರು ತಾಲೂಕಿನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರೇಗಾ ಉದ್ಯೋಗ ಖಾತ್ರಿ ಯೋಜನೆಯ ಕಂಪ್ಯೂಟರ್ ಆಪರೇಟರ್‌ಗೆ ಪಾಸಿಟಿವ್ ಬಂದಿರುವುದರಿಂದ ಪಂಚಾಯತ್ ಕಟ್ಟಡದಲ್ಲಿರುವ ಗ್ರಾಮ ಕರಣಿಕರ ಕಚೇರಿ, ಅಂಚೆ ಕಚೇರಿ ಮತ್ತು ಗ್ರಂಥಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಿ, ಎಲ್ಲ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ. ಮುಂದೆ 14 ದಿನಗಳ ಕಾಲ ಕಚೇರಿ ಬಂದ್ ಇರುತ್ತದೆ. ಇದಕ್ಕೆ ಈವರೆಗೆ ಯಾವುದೇ ಬದಲಿ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಬೈಂದೂರು ತಹಸೀಲ್ದಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News