ಕಾಂಚನ ಹೋಂಡಾ: ‘ಸಿಡಿ 110’ ಮಾರುಕಟ್ಟೆಗೆ ಬಿಡುಗಡೆ

Update: 2020-07-04 04:17 GMT

ಮಂಗಳೂರು, ಜು.3: ವಾಹನ ಮಾರಾಟ ಮತ್ತು ಸೇವೆಯಲ್ಲಿ ಅನುಭವ ಹೊಂದಿರುವ ಹಾಗೂ ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ನ ಅಂಗಸಂಸ್ಥೆ ಕಾಂಚನ ಹೋಂಡಾದ ಕಂಕನಾಡಿ ಬೈಪಾಸ್‌ನ ಶೋರೂಂನಲ್ಲಿ ಶುಕ್ರವಾರ ಬೆಳಗ್ಗೆ ಹೋಂಡಾ ‘ಸಿಡಿ 110’ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ವಿನೂತನ ‘ಬಿಎಸ್6’ ತಂತ್ರಜ್ಞಾನದೊಂದಿಗೆ ಈ ದ್ವಿಚಕ್ರ ವಾಹನವು ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ. ಹೋಂಡಾದ ವಿನೂತನ ಬೈಕ್‌ನ ಕೀಯನ್ನು ಮೊದಲ ಗ್ರಾಹಕರಾದ ಬಂಟ್ವಾಳದ ಅರ್ಲ ಕಟ್ಟೆಯಂಗಡಿಯ ಖಲಂದರ್ ಶಾಫಿ ಅವರಿಗೆ ಹಸ್ತಾಂತರಿಸಲಾಯಿತು. ಖಲಂದರ್ ಅವರು ಕಂಕನಾಡಿಯ ಕಾಂಚನ ಹೋಂಡಾ ಶೋರೂನಿಂದ ಖರೀದಿಸುತ್ತಿರುವ ಎರಡನೇ ಬೈಕ್ ಇದಾಗಿದ್ದು, ಈಗ ‘ಸಿಡಿ 110’ ವಾಹನವನ್ನು ಮನೆಗೆ ಕೊಂಡೊಯ್ದಿದ್ದಾರೆ.
ವಿನೂತನ ಬೈಕ್‌ನ ಕೀ ಸ್ವೀಕರಿಸಿ ಮಾತನಾಡಿದ ಖಲಂದರ್, ಕಂಕನಾಡಿ ಬೈಪಾಸ್‌ನ ಕಾಂಚನ ಹೋಂಡಾದಿಂದ ಉತ್ಕೃಷ್ಟ ಗುಣಮಟ್ಟದ ಸರ್ವಿಸ್ ಹಾಗೂ ಒಳ್ಳೆಯ ಆಫರ್ ಸಿಗುತ್ತವೆ ಎಂದು ತಿಳಿಸಿದ್ದಾರೆ.

‘ಸಿಡಿ 110’ ದ್ವಿಚಕ್ರ ವಾಹನದ ಎಕ್ಸ್‌ಶೋರೋಂ ಬೆಲೆಯು 65,785 ರೂ. (ಸ್ಟಾಂಡರ್ಡ್), 66,785 ರೂ.(ಡಿಲಕ್ಸ್) ಇದೆ. ಗ್ರಾಹಕರು ಸುಲಭವಾಗಿ ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದಾಗಿದೆ. ಅತಿ ಕಡಿಮೆ ಮುಂಗಡ ಪಾವತಿ ಹಾಗೂ ಅತಿ ಕಡಿಮೆ ಬಡ್ಡಿದರಲ್ಲಿ ವಾಹನ ಖರೀದಿಸಬಹುದಾಗಿದೆ.

ವಿಶೇಷತೆ: ಹೋಂಡಾದ ವಿನೂತನ ‘ಸಿಡಿ 110’ ದ್ವಿಚಕ್ರ ವಾಹನವು ನೋಡುಗರನ್ನು ಬೆರಗುಗೊಳಿಸಲಿದೆ. ವಾಹನದ ಮೇಲಿನ ಸ್ಟೈಲಿಶ್ ಗ್ರಾಫಿಕ್ಸ್ ಹೆಚ್ಚು ಆಕರ್ಷಣೀಯವಾಗಿದೆ. ಜೊತೆಗೆ, ವಾಹನದ ಬಾಡಿ ಕಲರ್‌ನಲ್ಲೇ ಮಿರರ್ ಇದೆ. ಡಿಸಿ ಹೆಡ್‌ಲ್ಯಾಂಪ್, ಇಂಪ್ರೆಸ್ಸಿವ್ ಕ್ರೋಮ್ ಮಫ್ಲರ್ ಕವರ್, ಗ್ರೇಸ್‌ಫುಲ್ ಸಿಲ್ವರ್ ಅಲ್ಲೋಯ್ ವ್ಹೀಲ್ಸ್, ಬಿಎಸ್6 ಮಾದರಿಯ 4 ಸ್ಟ್ರೋಕ್ ಇಂಜಿನ್ ಅಳವಡಿಸಲಾಗಿದೆ. ಎನ್‌ಹಾನ್ಸ್‌ಡ್ ಸ್ಮಾರ್ಟ್ ಪವರ್ (ಇ’ಎಸ್‌ಪಿ) ತಂತ್ರಜ್ಞಾನದಿಂದ ರೂಪಿತವಾಗಿದೆ. ಇಂಟೆಗ್ರೆಟೆಡ್ ಹೆಡ್‌ಲ್ಯಾಂಪ್ ಬೀಮ್ ಮತ್ತು ಪಾಸಿಂಗ್ ಸ್ವಿಚ್ ಸೇರಿದಂತೆ ಬ್ಯಾಟರಿ ಸೌಕರ್ಯ ಮತ್ತು ಅನುಕೂಲತೆ ಇದೆ. ‘ಎಸಿಜಿ’ಯೊಂದಿಗೆ ಸೈಲೆಂಟ್ ಸ್ಟಾರ್ಟ್, ಎಚ್‌ಇಟಿ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.

‘ಸುರಕ್ಷಿತ ಅಂತರ’ಕ್ಕಾಗಿ ದ್ವಿಚಕ್ರ ವಾಹನ ಖರೀದಿ: ಕೊರೋನ ಸೋಂಕು ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ನಡುವೆಯೇ ಎಲ್ಲರೂ ಸುರಕ್ಷಿತ ಅಂತರ ಕಾಪಾಡುವುದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ. ಸುರಕ್ಷಿತ ಅಂತರಕ್ಕಾಗಿಯೇ ಪ್ರಸಕ್ತ ದಿನಮಾನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಅಂದಹಾಗೆ ಈಗ ದ್ವಿಚಕ್ರ ವಾಹನ ಖರೀದಿಸುವುದು ಮೊದಲಿಗಿಂತಲೂ ಸುಲಭವಾಗಿದೆ. ಎಲ್ಲ ವರ್ಗಗಳ ಜನತೆಯು ಸಮರೋಪಾದಿಯಲ್ಲಿ ಬಂದು ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ನಿರೀಕ್ಷೆಗೂ ಮೀರಿ ದ್ವಿಚಕ್ರ ವಾಹನ ಮಾರಾಟವಾಗಿದೆ.

ಈಗಾಗಲೇ ಹೋಂಡಾ ಸಂಸ್ಥೆಯಿಂದ ಹೊಸ ‘ಬಿಎಸ್6’ ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ ಹೋಂಡಾ ಗ್ರಾಝಿಯ 125, ಆಕ್ಟಿವಾ 125, ಆಕ್ಟಿವಾ 6 ಜಿ, ಡಿಯೋ, ಶೈನ್, ಎಸ್‌ಪಿ 125, ಯೂನಿಕಾರ್ನ್, ಸಿಡಿ 110 ಸಾಯ್ಲೆಂಟ್ ಸ್ಟಾಟ್‌ನಿಂದ ಪ್ರಶಂಸೆಗೆ ಪಾತ್ರವಾಗಿದೆ. ಹಾಗೆಯೇ ಶೇ.10ರಿಂದ 16ರವರೆಗೆ ಅಧಿಕ ಮೈಲೇಜ್ ಸಿಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಮೆಗಾ ಮಾನ್ಸೂರ್ ಆಫರ್ ವಿಸ್ತರಣೆ
ಕಾಂಚನ ಹೋಂಡಾದ ಎಲ್ಲ ಶೋರೂಂಗಳಲ್ಲಿನ ಮೆಗಾ ಮಾನ್ಸೂನ್ ಕೊಡುಗೆಗಳನ್ನು ಗ್ರಾಹಕರ ಅಪೇಕ್ಷೆ ಮೇರೆಗೆ ಜು.15ರವರೆಗೆ ವಿಸ್ತರಣೆ ಮಾಡಲಾಗಿದೆ. ಗ್ರಾಹಕರಿಗೆಂದೇ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಪ್ರತಿ ವಾಹನ ಖರೀದಿಯ ಮೇಲೆ ವಿಶೇಷ ರಿಯಾಯಿತಿಯೊಂದಿಗೆ ಹೋಂಡಾ ರೈನ್ ಕೋಟ್/ ಹೋಂಡಾ ಹೆಲ್ಮೆಟ್/ ಫುಲ್‌ಟ್ಯಾಂಕ್ ಪೆಟ್ರೋಲ್/ 15 ಲಕ್ಷ ರೈಡರ್ ಇನ್ಶೂರೆನ್ಸ್‌ನ್ನು ಸಂಸ್ಥೆ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News