ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಜುಲೈ 6ರಿಂದ ಒಪಿಡಿ ಸಹಿತ ಎಲ್ಲಾ ಸೇವೆಗಳು ಲಭ್ಯ

Update: 2020-07-03 18:30 GMT

ಬಂಟ್ವಾಳ, ಜು.3: ಇಬ್ಬರು ರೋಗಿಗಳಿಗೆ ಕೋವಿಡ್ -19 (ಕೊರೋನ) ಸೋಂಕು ದೃಢಪಟ್ಟ ಬಳಿಕ ಹೊರ ರೋಗಿಗಳ ವಿಭಾಗ ಬಂದ್ ಆಗಿದ್ದ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸೋಮವಾರದಿಂದ (ಜುಲೈ 6) ಹೊರ ರೋಗಿಗಳ ವಿಭಾಗ ಸಹಿತ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 

ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಇಬ್ಬರು ರೋಗಿಗಳಿಗೆ ಕೊರೋನ ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸೋಂಕು ದೃಢಪಟ್ಟ ರೋಗಿಗಳನ್ನು ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಯನ್ನು ಸ್ಯಾನಿಟೈಸರ್ ಮಾಡುವ ಉದ್ದೇಶದಿಂದ ಹೊರ ರೋಗಿಗಳ ವಿಭಾಗ (OPD)ವನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. 

ಆಸ್ಪತ್ರೆಯ ಪ್ರತೀ ಕೊಠಡಿಗಳಿಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಅಲ್ಲದೆ ಕೋವಿಡ್ ವೈರಸ್ ನಿಯಂತ್ರಿಸುವ ಸಕಲ ಮುಂಜಾಗ್ರತಾ ಕ್ರಮಗಳನ್ನು ಮಾಡಲಾಗಿದೆ. ಇಬ್ಬರು ರೋಗಿಗಳಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೊರ ರೋಗಿಗಳ ವಿಭಾಗವನ್ನು ಹೊರೆತು ಪಡಿಸಿ ತುರ್ತು ಚಿಕಿತ್ಸೆ ಸಹಿತ ಬಾಕಿ ಎಲ್ಲಾ ಸೇವೆಗಳನ್ನು ಪ್ರಸಕ್ತ ನೀಡಲಾಗುತ್ತಿದೆ. ಸೋಮವಾರದಿಂದ ಹೊರ ರೋಗಿಗಳ ವಿಭಾಗವೂ ಎಂದಿನಂತೆ ಆರಂಭಗೊಳ್ಳಲಿದೆ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News