×
Ad

ವಿಟ್ಲ: ಕೆಲಸಕ್ಕೆ ಹಾಜರಾದ ಉತ್ತರ ಪ್ರದೇಶದ ಕ್ಷೌರಿಕರು

Update: 2020-07-04 19:04 IST
ಸಾಂದರ್ಭಿಕ ಚಿತ್ರ

ಬಂಟ್ವಾಳ, ಜು.4: ಲಾಕ್ ಡೌನ್ ಸಂದರ್ಭದಲ್ಲಿ ಊರಿಗೆ ತೆರಳಿದ್ದ ಉತ್ತರ ಪ್ರದೇಶದ ಮೂವರು ಕ್ಷೌರಿಕರು ಶನಿವಾರ ಮರಳಿ ಬಂದು ಸಲೂನ್ ನಲ್ಲಿ ಕೆಲಸಕ್ಕೆ ಹಾಜರಾದ ಬಗ್ಗೆ ಮಾಹಿತಿ ಪಡೆದ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಸಲೂನ್ ಗೆ ಬೀಗ ಹಾಕಿ ನಾಲ್ವರು ಕ್ಷೌರಿಕರಿಗೆ ಹೋಂ ಕ್ವಾರಂಟೈನ್ ವಿಧಿಸಿದ್ದಾರೆ. 

ವಿಟ್ಲದ ಸಲೂನ್, ಹೊಟೇಲ್ ಗಳಲ್ಲಿ ದುಡಿಯುತ್ತಿದ್ದ ಉತ್ತರ ಪ್ರದೇಶದ ಕಾರ್ಮಿಕರನ್ನು ಲಾಕ್ ಡೌನ್ ಸಂದರ್ಭದಲ್ಲಿ ಸ್ಥಳೀಯ ಪಟ್ಟಣ ಪಂಚಾಯತ್ ಅಧಿಕಾರಿಗಳು ಅವರ ಊರಿಗೆ ಕಳುಹಿಸಿದ್ದರು. ಊರಿನಿಂದ ಮತ್ತೆ ವಿಟ್ಲಕ್ಕೆ ಮರಳಿದ ನಾಲ್ವರು ಕ್ಷೌರಿಕರ ಪೈಕಿ ಮೂವರು ಇಂದು ವಿಟ್ಲದ ಅಡ್ಡದ ಬೀದಿಯಲ್ಲಿರುವ ಸಲೂನ್ ನಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. 

ಕ್ಷೌರಿಕರು ಬಂದಿರುವ ಮಾಹಿತಿ ಪಡೆದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಮತ್ತು ಸಿಬ್ಬಂದಿ ಸಲೂನ್ ಗೆ ಆಗಮಿಸಿ ಬೀಗ ಜಡಿದಿದ್ದಾರೆ‌. ಕ್ಷೌರಿಕರನ್ನು ಮೇಗಿನಪೇಟೆಯಲ್ಲಿರುವ ಮನೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ‌. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News