ಕೃಷಿ ಸಹಾಯಕರು ನೇಮಕಗೊಳ್ಳಲಿ: ಉಡುಪಿ ಜಿಲ್ಲಾ ಕೃಷಿಕ ಸಂಘ

Update: 2020-07-04 13:53 GMT

ಉಡುಪಿ, ಜು.4: ಆಡಳಿತಕ್ಕೆ ಬರುವ ಸರಕಾರಗಳು ರೈತರ ಏಳಿಗೆಗೆಂದು ಹಲವಾರು ಯೋಜನೆಗಳು, ಸವಲತ್ತುಗಳನ್ನು ರೂಪಿಸಿ ಜಾರಿಗೆ ತರುತ್ತಿರುತ್ತವೆ. ಆದರೆ ಸರಕಾರ ಜಾರಿಗೆ ತರುತ್ತಿರುವ ಬಹಳಷ್ಟು ಯೋಜನೆಗಳು, ಎಲ್ಲಾ ಕೃಷಿಕರ ಅರಿಗೆ ಬರುವುದೇ ಇಲ್ಲ. ಇದರಿಂದ ಅವರಿಗೆ ಕೃಷಿ ಯೋಜನೆ, ಸವಲತ್ತುಗಳು ಸಕಾಲದಲ್ಲಿ ಸಿಗುವುದಿಲ್ಲ. ಇವುಗಳನ್ನು ರೈತರಿಗೆ ತಿಳಿಹೇಳಲು ಗ್ರಾಮ, ಕ್ಷೇತ್ರ ಮಟ್ಟದಲ್ಲಿ ಕೃಷಿ ಇಲಾಖೆ ಮತ್ತು ರೈತರರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೃಷಿ ಸಹಾಯಕ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಉಡುಪಿ ಜಿಲ್ಲಾ ಕೃಷಿಕ ಸಂಘವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲರನ್ನು ಒತ್ತಾಯಿಸಿದೆ.
 
ನಮ್ಮ ದೇಶದಲ್ಲಿ ಕೃಷಿಕರು ಇರುವುದೇ ಗ್ರಾಮೀಣ ಪ್ರದೇಶಗಳಲ್ಲಿ. ಅವರಿಗೆ ಸರಕಾರಗಳ ಯೋಜನೆಗಳ ಮಾಹಿತಿ ತಿಳಿಯುವ ವೇಳೆಗೆ ಕಾಲಮಿತಿ ಮುಗಿದಿ ರುತ್ತದೆ. ಹೀಗಾಗಿ ಸರಕಾರದ ಯೋಜನೆಗಳನ್ನು ತಲುಪಬೇಕಾದವರನ್ನು ಸಕಾಲ ದಲ್ಲಿ ತಲುಪಲು ವಿಫಲವಾಗುತ್ತದೆ. ಆದುದರಿಂದ ರಾಜ್ಯದಾದ್ಯಂತ ಗ್ರಾಮ/ಕ್ಷೇತ್ರ ಮಟ್ಟಗಳಲ್ಲಿ ಕೃಷಿ ಇಲಾಖೆ ಮತ್ತು ರೈತರ ಮಧ್ಯೆ ಸಂಪರ್ಕಕೊಂಡಿಯಾಗಿ ಕೃಷಿ ಯೋಜನೆ, ಸೌಲಭ್ಯಗಳ ಮಾಹಿತಿಗಳನ್ನು ಸಕಾಲದಲ್ಲಿ ನೀಡಿ, ರೈತ ಸ್ನೇಹಿಗಳಾಗಿ ಕೆಲಸ ಮಾಡುತ್ತಿದ್ದ ಕೃಷಿ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಎಂದು ಜಿಲ್ಲಾ ಕೃಷಿಕ ಸಂಘ ಆಗ್ರಹಿಸಿದೆ.

ಈಗಾಗಲೆ ಕೃಷಿ ವಿಶ್ವವಿದ್ಯಾಲಯಗಳಿಂದ ಕೃಷಿ ಡಿಪ್ಲೋಮ ಪದವಿ ಪಡೆದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿದರೆ ಸರಕಾರ ಮತ್ತು ಕೃಷಿಕರ ನಡುವಿನ ಹಲವಾರು ಸಮಸ್ಯೆಗಳು ಪರಿಹಾರವಾಗುವುದಲ್ಲದೆ ನಿರುದ್ಯೋಗ ಸಮಸ್ಯೆಯೂ ಒಂದಷ್ಟು ನಿವಾರಣೆಯಾಗಲಿದೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News