ಎಎನ್‌ಎಫ್‌ನಿಂದ 33 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Update: 2020-07-04 14:12 GMT

ಹೆಬ್ರಿ, ಜು.4: ಹೆಬ್ರಿಯ ನಕ್ಸಲ್ ನಿಗ್ರಹ ಪಡೆ ಇವರ ವತಿಯಿಂದ ಕೋವಿಡ್ -19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶಗಳ ಗುಡ್ಡಗಾಡು ಪ್ರದೇಶದ ಬಡ ಜನರಿಗೆ ಆಹಾರ ಸಾಮಗ್ರಿಗಳನ್ನು ಇಂದು ವಿತರಿಸಲಾಯಿತು.

ನಾಡ್ಪಾಲು ಮತ್ತು ಕಬ್ಬಿನಾಲೆ ಗ್ರಾಮಗಳ ಸುಮಾರು 33 ಬಡ ಕುಟುಂಬ ಗಳಿಗೆ ಆಹಾರ ಕಿಟ್‌ಗಳನ್ನು ನೀಡಲಾಯಿತು. ನಕ್ಸಲ್ ನಿಗ್ರಹ ಪಡೆಯ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News