ಕುಂದಾಪುರದಲ್ಲಿ ಆಟೋರಿಕ್ಷಾ, ವಾಹನ ಚಾಲಕರಿಂದ ಪ್ರತಿಭಟನೆ

Update: 2020-07-04 14:14 GMT

ಕುಂದಾಪುರ, ಜು.4: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕುಂದಾಪುರ ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ವತಿಯಿಂದ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಜು.3ರಂದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ರಿಕ್ಷಾ, ವಾಹನ ಚಾಲಕರು ಕರೋನ ವಾರಿಯರ್ಸ್ ಆಗಿದ್ದಾರೆ. ಸಾರ್ವಜನಿಕರನ್ನು ಸಂಪರ್ಕಿಸುವ ಚಾಲಕರಿಗೆ ಬದುಕು ನಡೆಸುವುದು ಕಷ್ಟಕರವಾಗಿದೆ. ಈ ಅವಧಿಯಲ್ಲಿಯೇ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಅವರ ಬದುಕನ್ನೇ ಕಸಿದುಕೊಂಡಿದೆ. ಕೂಡಲೇ ಸರಕಾರ ಬೆಲೆ ಏರಿಕೆ ಹಿಂತೆಗೆದುಕೊಳ್ಳಬೇಕು.

ಚಾಲಕರನ್ನು ಕರೋನ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ಘೋಷಣೆ ಮಾಡಿದ 5000ರೂ. ಪರಿಹಾರವನ್ನು ಕೂಡಲೇ ವರ್ಗಾಯಿಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಬರೇಕಟ್ಟು, ಸಂಘದ ಸಲಹೆ ಗಾರರಾದ ಚಂದ್ರ ವಿ., ಶಾಸ್ತ್ರಿ ಸರ್ಕಲ್ ರಿಕ್ಷಾ ನಿಲ್ದಾಣದ ಮುಖಂಡ ಕೃಷ್ಣ ಪೂಜಾರಿ, ಕರ್ಕಿ ನಿಲ್ದಾಣದ ಮುಖಂಡ ಮಂಜುನಾಥ ಸೇರಿಗಾರ್, ಯುನಿಟಿ ಹಾಲ್ ನಿಲ್ದಾಣದ ಮುಖಂಡ ಉದಯ ಬಳೆಗಾರ್, ಕಾಳವಾರ ನಿಲ್ದಾಣದ ಮುಖಂಡರಾದ ಕೆ.ವಿ.ಸುರೇಶ್ ಕುಮಾರ್ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News